ಚಿಕನ್ ಎಂದು ಸತ್ತ ಇಲಿಯನ್ನೇ ತಿಂದೇಬಿಟ್ರು: ಯಡವಟ್ಟು ಮಾಡಿ ರೆಸ್ಟೋರೆಂಟ್ ವಿರುದ್ಧ ಕೇಸ್ ಫೈಲ್
ಮುಂಬೈನ ಬಾಂದ್ರಾದಲ್ಲಿರುವ ಉಪಕನಗರದಲ್ಲಿನ ರೆಸ್ಟೋರೆಂಟ್ ವೊಂದರಲ್ಲಿ ಚಿಕನ್ ಆಹಾರದಲ್ಲಿ ಸತ್ತ ಇಲಿ ಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ. ಈ ಬಗ್ಗೆ ಗ್ರಾಹಕರೊಬ್ಬರು ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ರೆಸ್ಟೋರೆಂಟ್ ನ ವ್ಯವಸ್ಥಾಪಕ ಹಾಗೂ ಇಬ್ಬರು ಅಡುಗೆಯವರನ್ನು ಬಂಧಿಸಿದ್ದಾರೆ. ರೆಸ್ಟೋರೆಂಟ್ ಗೆ ಗ್ರಾಹಕ ಭೇಟಿ ನೀಡಿದ್ದಾಗ ಆರ್ಡರ್ ಮಾಡಿದ ಚಿಕನ್ ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಗ್ರಾಹಕರಿಗೆ ಆರಂಭದಲ್ಲಿ ಇದು ತಿಳಿದಿರಲಿಲ್ಲ. ಅದು ಸಹ ಚಿಕನ್ ನ ಭಾಗ ಎಂದೇ ಭಾವಿಸಿ ತಿಂದಿದ್ದರು.
ಆದರೆ ಮಾಂಸದ ಬಗ್ಗೆ ಆ ನಂತರ ಅನುಮಾನ ಮೂಡಿ ಪರಿಶೀಲಿಸಿದಾಗ ಅದು ಇಲಿ ಮರಿ ಎಂದು ತಿಳಿಯಿತು. ಈ ಬಗ್ಗೆ ರೆಸ್ಟೋರೆಂಟ್ ಸಿಬ್ಬಂದಿಗೆ ದೂರು ನೀಡಿದಾಗ ಅವರು ಗ್ರಾಹಕನಲ್ಲಿ ಕ್ಷಮೆ ಕೋರಿದ್ದಾರೆ. ಆದರೆ ಈ ಬಳಿಕ ಗ್ರಾಹಕನಿಗೆ ಅನಾರೋಗ್ಯ ಉಂಟಾಗಿದ್ದು ವೈದ್ಯರ ಬಳಿ ತೆರಳಿದ್ದಾರೆ. ಗ್ರಾಹಕನ ದೂರಿನ ಆಧಾರದಲ್ಲಿ ಸೆಕ್ಷನ್ 272 (ಕಲಬೆರಕೆ ಆಹಾರ) ಸೆಕ್ಷನ್ 336 (ಇತರರ ಜೀವನ ಅಥವಾ ವೈಯಕ್ತಿಕ ಸುರಕ್ಷತೆಗೆ ಅಪಾಯವನ್ನುಂಟುಮಾಡುವುದು) ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.



























