ಸಾಹಿತಿಗಳಿಗೆ ಬೆದರಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಗೃಹ ಸಚಿವ ಪರಮೇಶ್ವರ್ - Mahanayaka

ಸಾಹಿತಿಗಳಿಗೆ ಬೆದರಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ: ಗೃಹ ಸಚಿವ ಪರಮೇಶ್ವರ್

dr g parameshwer
17/08/2023


Provided by

ಬೆಂಗಳೂರು: ಕಲ್ಬುರ್ಗಿ ಅವರ  ಪ್ರಕರಣ ನಮ್ಮ ಮುಂದೆಯೇ ಇದೆ.ಇನ್ನು  ಗೌರಿ ಲಂಕೇಶ್  ಹತ್ಯೆ ಆಗಿದ್ದು ನಾವು ಮರೆತಿಲ್ಲ. ಇಂತಹ ಸಮಯದಲ್ಲಿ ಸಾಹಿತಿಗಳಿಗೆ ಬೆದರಿಕೆ ಬಂದಿದೆ. ನಾವು ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಗೃಹ ಸಚಿವ ಪರಮೇಶ್ವರ್  ತಿಳಿಸಿದ್ದಾರೆ.

ಸಾಹಿತಿಗಳಿಗೆ ಬೆದರಿಕೆ ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಬೆದರಿಕೆಗೆ ಒಳಗಾಗಿರುವ  ಸಾಹಿತಿಗಳಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಲು ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದೇನೆ ಎಂದು ತಿಳಿಸಿದರು.

ಸಾಹಿತಿಗಳಿಗೆ ನನಗೆ ಸಮಯ ಕೇಳಿದ್ದಾರೆ. ಈಗಾಗಲೇ ಅವರಿಗೆ ಭದ್ರತೆ ನೀಡಲು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅವರು ನೀಡಿರುವ ಪತ್ರವನ್ನು ಡಿಜಿಗೆ ಕಳುಹಿಸಿಕೊಡುತ್ತಿದ್ದೇನೆ ಎಂದರು.

ಇತ್ತೀಚಿನ ಸುದ್ದಿ