ಹಗಲು ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸಿದ ಹಣದಲ್ಲಿ ರಾತ್ರಿ ಬಿಜೆಪಿ ನಾಯಕರು ಕುಡಿದು ಬೀಳುತ್ತಾರೆ | ನಾಲಿಗೆ ಹರಿಯಬಿಟ್ಟ ಕಾಂಗ್ರೆಸ್ ಶಾಸಕ - Mahanayaka

ಹಗಲು ರಾಮ ಮಂದಿರಕ್ಕೆ ದೇಣಿಗೆ ಸಂಗ್ರಹಿಸಿದ ಹಣದಲ್ಲಿ ರಾತ್ರಿ ಬಿಜೆಪಿ ನಾಯಕರು ಕುಡಿದು ಬೀಳುತ್ತಾರೆ | ನಾಲಿಗೆ ಹರಿಯಬಿಟ್ಟ ಕಾಂಗ್ರೆಸ್ ಶಾಸಕ

03/02/2021


Provided by

ಭೋಪಾಲ್: ಬಿಜೆಪಿ ನಾಯಕರು ಹಗಲಿನಲ್ಲಿ ರಾಮಮಂದಿರಕ್ಕೆ ಹಣ ಸಂಗ್ರಹಿಸಿ, ರಾತ್ರಿ ಕುಡಿದು ಬಾರ್ ನಲ್ಲಿ ಬೀಳುತ್ತಾರೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ನಾಲಿಗೆ ಹರಿಯಬಿಟ್ಟಿದ್ದಾರೆ.

 ಮಧ್ಯಪ್ರದೇಶದ ಜಬುವಾ ಕ್ಷೇತ್ರದ ಕಾಂಗ್ರೆಸ್​ ಶಾಸಕ ಕಾಂತಿಲಾಲ್ ಭುರಿಯಾ ಈ ವಿವಾದಾತ್ಮಕ ಹೇಳಿಕೆ ನೀಡಿದ್ದು, ಬಿಜೆಪಿ ನಾಯಕರು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಕೋಟಿ ಕೋಟಿ ರೂ.ಸಂಗ್ರಹ ಮಾಡಿದ್ದಾರೆ. ಆ ಹಣವೆಲ್ಲ ಎಲ್ಲಿ ಹೋಯಿತು? ಈ ನಾಯಕರು ಬೇರೇನೂ ಮಾಡುತ್ತಿಲ್ಲ. ಬೆಳಗ್ಗೆಯೆಲ್ಲ ಹಣ ಸಂಗ್ರಹ ಮಾಡಿ, ರಾತ್ರಿ ಕುಡಿದು ಹಣವನ್ನು  ಹಾಳು ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಮಮಂದಿರದ ವಿಚಾರದಲ್ಲಿ ಎರಡು ರೀತಿಯ ಅಭಿಪ್ರಾಯವನ್ನು ತಳೆದಿದ್ದ ಕಾಂಗ್ರೆಸ್, ಒಂದೆಡೆ ರಾಮಮಂದಿರಕ್ಕೆ ಪರವಾಗಿ, ಇನ್ನೊಂದು ಕಡೆ ರಾಮಮಂದಿರಕ್ಕೆ ವಿರೋಧವಾಗಿ ಅಭಿಪ್ರಾಯ ವ್ಯಕ್ತಪಡಿಸುತ್ತಿದೆ. ರಾಮಮಂದಿರದ ವಿಚಾರದಲ್ಲಿ ಕಾಂಗ್ರೆಸ್ ಗೆ ದೃಢವಾದ ನಿರ್ಧಾರವಿಲ್ಲ. ಒಂದೆಡೆ ಮಂದಿರ ನಿರ್ಮಾಣಕ್ಕೆ ಕಾಂಗ್ರೆಸ್ ನಾಯಕರು ದೇಣಿಗೆ ನೀಡುತ್ತಿದ್ದಾರೆ. ಇನ್ನೊಂದು ಕಡೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಂಗ್ರೆಸ್ ರಾಮಮಂದಿರದ ವಿಚಾರದಲ್ಲಿ ಒಂದು ನಿರ್ಧಾರವನ್ನು ಪ್ರಕಟಿಸಲಿ ಎಂಬ ಒತ್ತಾಯಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ