ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣವನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ - Mahanayaka

ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಕ್ಷಣವನ್ನು ವೀಕ್ಷಿಸಲು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ

pilikulla
23/08/2023


Provided by

ಇಡೀ ದೇಶ ಕಾತುರದಿಂದ ನಿರೀಕ್ಷಿಸುತ್ತಿರುವ ಚಂದ್ರಯಾನ–3ರ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಚಂದ್ರನ ಮೇಲೆ ಇಳಿಯುವ ಕ್ಷಣವನ್ನು ವೀಕ್ಷಿಸಲು ಮಂಗಳೂರಿನ ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ವ್ಯವಸ್ಥೆ ಮಾಡಲಾಗಿದೆ.

ಆ.23ರ ಬುಧವಾರ ಸಂಜೆ 5.20ರಿಂದ 6.30ರ ವರೆಗೆ ಚಂದ್ರನ ಸನಿಹದಲ್ಲಿ ನಡೆಯುವ ಈ ಕೌತುಕವನ್ನು ವೀಕ್ಷಿಸಲು ಕೇಂದ್ರದ ಸಭಾಭವನದಲ್ಲಿ ದೊಡ್ಡ ಪರದೆಯ ಮೇಲೆ ನೇರ ಪ್ರಸಾರದ ವ್ಯವಸ್ಥೆಯನ್ನು ಮಾಡಲಾಗಿದೆ. ಕೇಂದ್ರದ ಸಿಬ್ಬಂದಿ ಇದರ ಬಗೆಗಿನ ಮಾಹಿತಿ ಹಾಗೂ ವೈಶಿಷ್ಟ್ಯಗಳನ್ನು ಆಸಕ್ತರಿಗೆ ವಿವರಿಸುವರು.

ಈ ರೀತಿಯ ಪ್ರಸಾರಕ್ಕೆ ವ್ಯವಸ್ಥೆಯಿರುವ ಎಲ್ಲಾ ಕಾಲೇಜು ಹಾಗೂ ವಿದ್ಯಾ ಸಂಸ್ಥೆಗಳು ನಮ್ಮ ವಿಜ್ಞಾನಿಗಳ ಈ ಸಾಧನೆಯ ನೇರ ಪ್ರಸಾರವನ್ನು ವೀಕ್ಷಿಸಲು ವ್ಯವಸ್ಥೆಯನ್ನು ಮಾಡಿ, ವಿದ್ಯಾರ್ಥಿಗಳಲ್ಲಿ ಇಂತಹ ಸಾಧನೆಗಳನ್ನು ಮಾಡಲು ಸ್ಫೂರ್ತಿ ನೀಡುವ ಪ್ರಯತ್ನವನ್ನು ಮಾಡಬೇಕು. ಈ ಪ್ರಯತ್ನದಲ್ಲಿ ಭಾಗಿಯಾಗುವ ವಿಜ್ಞಾನ ಕೇಂದ್ರವು ಆಸಕ್ತರನ್ನು ನೇರ ಪ್ರಸಾರಕ್ಕೆ ಆಹ್ವಾನಿಸುತ್ತದೆ.

ಈ ಅಪೂರ್ವ ಅವಕಾಶಕ್ಕಾಗಿ ಕೇಂದ್ರವು ಇಸ್ರೋ ಸಂಸ್ಥೆಯನ್ನು ಅಭಿನಂದಿಸಿದೆ. ವಿಜ್ಞಾನ ಕೇಂದ್ರವನ್ನು ಚಂದ್ರಯಾನ-3ರ ಮಾಹಿತಿ ಹಾಗೂ ಅರಿವನ್ನು ಅಲ್ಲಿಯ ವಿಜ್ಞಾನಿಗಳ ಸಹಕಾರದಿಂದ ಅಧ್ಯಾಪಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾರ್ಯಕ್ರಮಗಳನ್ನು ಕೇಂದ್ರದಲ್ಲಿ ನಡೆಸುವ ಅವಕಾಶ ನೀಡಿದ್ದಕ್ಕಾಗಿ ತನ್ನ ಕೃತಜ್ಞತೆಯನ್ನು ಸಲ್ಲಿಸುತ್ತದೆ ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ