ವಿಡಿಯೋ ಮಾಡಿ ಸಾವಿಗೆ ಶರಣಾಗಲು ಯತ್ನಿಸಿದ ಯುವಕನ ಸ್ಥಿತಿ ಚಿಂತಾಜನಕ - Mahanayaka
9:25 PM Thursday 23 - October 2025

ವಿಡಿಯೋ ಮಾಡಿ ಸಾವಿಗೆ ಶರಣಾಗಲು ಯತ್ನಿಸಿದ ಯುವಕನ ಸ್ಥಿತಿ ಚಿಂತಾಜನಕ

Abdul Nasir
23/08/2023

ವೀಡಿಯೋ ಮಾಡಿ ಯುವಕನೊಬ್ಬ ಸಾವಿಗೆ ಶರಣಾಗಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದ್ದು, ಇದೀಗ ಚಿಂತಾಜನಕ ಸ್ಥಿತಿಯಲ್ಲಿರುವ ಆತನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪುತ್ತೂರು ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್ ಸಾವಿಗೆ ಶರಣಾಗಲು ಯತ್ನಿಸಿದ ಯುವಕನಾಗಿದ್ದಾನೆ. ಆತ್ಮಹತ್ಯೆಗೆ ಯತ್ನಿಸುವ ಮುನ್ನ ಯುವಕನು ತನ್ನ ಸಾವಿನ ನಿರ್ಧಾರಕ್ಕೆ ಕಾರಣವೇನು, ಕಾರಣರು ಯಾರು ಎಂದು ವಿಡಿಯೋ ಮಾಡಿದ್ದು, ಬ್ಯಾರಿ ಮಲಾಮೆ ಭಾಷೆಯಲ್ಲಿ ಹೇಳಿದ್ದಾನೆ. ಅಲ್ಲದೇ ವಿಡಿಯೋದಲ್ಲಿ ಸಾವಿಗೆ ಶರಣಾಗುತ್ತಿರೋದಾಗಿಯೂ ಹೇಳಿದ್ದಾನೆ.

”ತಾನು ಕಟ್ಟತ್ತಾರು ನಿವಾಸಿ ಅಬ್ದುಲ್ ನಾಸಿರ್. ಅದ್ರಾಮ ಎಂಬವರ ಮನೆಯಲ್ಲಿ ಕಾರು ಚಾಲಕನಾಗಿದ್ದೆ. ಆದರೆ ಅದ್ರಾಮ, ಅವರ ಅಣ್ಣ, ಅಣ್ಣನ ಮಕ್ಕಳು ಸೇರಿ ಬೆಳ್ಳಾರೆಯಲ್ಲಿ ಹಲ್ಲೆ ನಡೆಸಿದ್ದಾರೆ. ಇದೀಗ ಅವರೇ ನನ್ನನ್ನು ಪುತ್ತೂರಿಗೆ ಕರೆದೊಯ್ದು ಬಿಡುತ್ತಿದ್ದಾರೆ. ನನಗೆ ಅವರೊಂದಿಗೆ ಡ್ರೈವರ್ ಇದ್ದಾಗ ಇರುವ ಸಂಬಂಧ ಬಿಟ್ಟರೆ ಬೇರೇನೂ ಸಂಬಂಧವಿಲ್ಲ. ನಾನು ಈಗ ಪುತ್ತೂರಿಗೆ ಹೋಗಿ ಸಾವಿಗೆ ಶರಣಾಗುತ್ತೇನೆ. ನನ್ನ ಸಾವಿಗೆ ಅದ್ರಾಮ ಮತ್ತು ಅವನ ಕುಟುಂಬಸ್ಥರೇ ಕಾರಣ’ ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ಈ ವ್ಯಕ್ತಿ ಕಾರಲ್ಲಿ ಕೂತು ವೀಡಿಯೋ ಮಾಡಿದ್ದು ಕಾರಲ್ಲಿದ್ದವರು ಈ ವ್ಯಕ್ತಿ ಸಾವಿಗೆ ಶರಣಾಗುತ್ತೇನೆಂದು ಹೇಳುವಾಗ ಸುಮ್ಮನೆ ಕೂತಿರುವುದು ವೀಡಿಯೋದಲ್ಲಿ ಕಾಣಬಹುದು.

ಇತ್ತೀಚಿನ ಸುದ್ದಿ