ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಾಯುಪಡೆ ಯೋಧ: ಸಾವಿಗೆ ಕಾರಣ ಏನು..? - Mahanayaka
11:27 PM Friday 19 - December 2025

ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ವಾಯುಪಡೆ ಯೋಧ: ಸಾವಿಗೆ ಕಾರಣ ಏನು..?

kerala news
28/08/2023

ಭಾರತೀಯ ವಾಯುಪಡೆಯ 35 ವರ್ಷದ ಜವಾನ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಪ್ರದೇಶದ ಬರೇಲಿಯಲ್ಲಿ ನಡೆದಿದೆ. ಮೃತನನ್ನು ಉತ್ತರಾಖಂಡದ ಬಾಗೇಶ್ವರ ಜಿಲ್ಲೆಯ ಜಗದೀಶ್ ರಾಮ್ (35) ಎಂದು ಗುರುತಿಸಲಾಗಿದೆ.

ಐಎಎಫ್‌ನಲ್ಲಿ ನಾಯಕ್ ಆಗಿ ನೇಮಕಗೊಂಡಿದ್ದ ರಾಮ್ ಅವರು ಸಾವಿಗೆ ಮುನ್ನ ಬರೆದ ಡೆತ್ ನೋಟನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಜಗದೀಶ್ ರಾಮ್ ಕಳೆದ ಕೆಲವು ದಿನಗಳಿಂದ ತೊಂದರೆಗೀಡಾಗಿದ್ದರು ಎಂಬುದು ಬೆಳಕಿಗೆ ಬಂದಿದೆ, ಅವರ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಆದರೆ ಪೊಲೀಸರು ಡೆತ್ ನೋಟಲ್ಲಿ ಇದ್ದ ವಿಷಯವನ್ನು ಬಹಿರಂಗಪಡಿಸಿಲ್ಲ.

ಇತ್ತೀಚಿನ ಸುದ್ದಿ