ರಸ್ತೆಯಲ್ಲೇ ಭರ್ಜರಿ ಕೃಷಿ ಕಾರ್ಯ, ಮೀನುಗಾರಿಕೆಯಲ್ಲಿ ತೊಡಗಿದ ಸಚೇತನ ತಂಡ: ರಸ್ತೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ - Mahanayaka
9:54 AM Thursday 6 - November 2025

ರಸ್ತೆಯಲ್ಲೇ ಭರ್ಜರಿ ಕೃಷಿ ಕಾರ್ಯ, ಮೀನುಗಾರಿಕೆಯಲ್ಲಿ ತೊಡಗಿದ ಸಚೇತನ ತಂಡ: ರಸ್ತೆ ಅವ್ಯವಸ್ಥೆ ವಿರುದ್ಧ ಪ್ರತಿಭಟನೆ

mudigere
28/08/2023

ಚಿಕ್ಕಮಗಳೂರು: ರಸ್ತೆ ಮಧ್ಯದ ಬೃಹದಾಕಾರದ ಗುಂಡಿಗಳಲ್ಲಿ ಭತ್ತ ನಾಟಿ, ಮಾಡಿ, ಕೆಲವು ಗುಂಡಿಗಳಲ್ಲಿ ಮೀನು ಹಿಡಿಯುವ ಮೂಲಕ ಮೂಡಿಗೆರೆ ಪಟ್ಟಣದಲ್ಲಿ ಸಚೇತನ ತಂಡ ವಿಶಿಷ್ಟ ಪ್ರತಿಭಟನೆ ನಡೆಸಿತು.

ಗುಂಡಿಮಯವಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಜನಪ್ರತಿನಿಧಿಗಳನ್ನು ಅಣಕಿಸಿದ ಪ್ರತಿಭಟನಾಕಾರರು ಭರ್ಜರಿ ಕೃಷಿ ಕಾರ್ಯ, ಮೀನುಗಾರಿಕೆ ನಡೆಸಿದರು.

ರಸ್ತೆ ಮಧ್ಯದ ಗುಂಡಿಯಲ್ಲಿ ಭತ್ತದ ನಾಟಿ ಮಾಡಿ, ರಸ್ತೆಗಳ ಗುಂಡಿಗೆ ಸಿಲ್ವರ್ ಗಿಡನೆಟ್ಟರಲ್ಲದೇ ರಸ್ತೆಯ ಗುಂಡಿಗಳಿಗೆ ಗಾಳ ಹಾಕಿ ಮೀನು ಹಿಡಿದು ಸರ್ಕಾರವನ್ನು ವ್ಯಂಗ್ಯವಾಡಿದರು.

ಮಂಗಳೂರು-ಕಡೂರು-ಮೂಡಿಗೆರೆಬೇಲೂರು-ಚಿಕ್ಕಮಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಚೇತನ ಯುವಕ ಸಂಘ ಇಂತಹದ್ದೊಂದು ಪ್ರತಿಭಟನೆಯನ್ನು ನಡೆಸಿದ್ದು, ರಸ್ತೆ ಅವ್ಯವಸ್ಥೆ ವಿರುದ್ಧ ಕ್ರಮಕೈಗೊಳ್ಳದ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಲಾಯಿತು.

ಇತ್ತೀಚಿನ ಸುದ್ದಿ