ಸಹೋದರತ್ವದ ರಕ್ಷಾ ಬಂಧನದ ರಕ್ಷೆ ರಾಷ್ಟ್ರೀಯವಾದಿ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ : ಯಶ್ ಪಾಲ್ ಸುವರ್ಣ - Mahanayaka

ಸಹೋದರತ್ವದ ರಕ್ಷಾ ಬಂಧನದ ರಕ್ಷೆ ರಾಷ್ಟ್ರೀಯವಾದಿ ಸಮಾಜ ನಿರ್ಮಾಣಕ್ಕೆ ಪ್ರೇರಣೆಯಾಗಲಿ : ಯಶ್ ಪಾಲ್ ಸುವರ್ಣ

yashpal
30/08/2023


Provided by

ಉಡುಪಿ ನಗರ ಬಿಜೆಪಿ ಯುವ ಮೋರ್ಚಾ ಮತ್ತು ಮಹಿಳಾ ಮೋರ್ಚಾ ವತಿಯಿಂದ ಉಡುಪಿ ಪುತ್ತೂರಿನ ಕುದ್ಮುಲ್ ರಂಗ ರಾವ್ ನಗರದ ಎಸ್. ಟಿ. ಕಾಲನಿಯಲ್ಲಿ ಆಯೋಜಿಸಿದ್ದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಉಡುಪಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಭಾಗವಹಿಸಿ ರಕ್ಷಾ ಬಂಧನದ ಶುಭಾಶಯ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಯಶ್ ಪಾಲ್ ಸುವರ್ಣ ಸಹೋದರತೆಯ ಸಂಕೇತದ ಹಬ್ಬವಾಗಿ ಆಚರಿಸುವ ರಕ್ಷಾ ಬಂಧನದ ರಕ್ಷೆ ಸಮಾಜದಲ್ಲಿ ಮೇಲು ಕೀಳು ಭಾವನೆಯನ್ನು ಅಳಿಸಿ ಒಗ್ಗಟ್ಟಿನಿಂದ ರಾಷ್ಟ್ರೀಯವಾದಿ ಚಿಂತನೆಯ ಸಮಾಜದ ನಿರ್ಮಾಣದ ಮೂಲಕ ದೇಶದ ಅಭಿವೃದ್ದಿಗೆ ಪ್ರೇರಣೆಯಾಗಲಿ ಎಂದು ಹೇಳಿದರು.

ಸಮಾರಂಭದಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸುಪ್ರಸಾದ್ ಶೆಟ್ಟಿ, ಗೀತಾಂಜಲಿ ಸುವರ್ಣ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷರಾದ ಶ್ರೀಮತಿ ವೀಣಾ ಶೆಟ್ಟಿ, ಬಿಜೆಪಿ ಯುವ ಮೋರ್ಚಾ ಉಡುಪಿ ನಗರ ಅಧ್ಯಕ್ಷರಾದ ರೋಶನ್ ಶೆಟ್ಟಿ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಶ್ಮಿತ ಬಾಲಕೃಷ್ಣ ಶೆಟ್ಟಿ, ಮೋರ್ಚಾ ನಗರ ಪ್ರಧಾನ ಕಾರ್ಯದರ್ಶಿ ಸುಜಲ ಸುವರ್ಣ, ನಗರ ಸಭೆ ಸದಸ್ಯರಾದ ಜಯಂತಿ ಪೂಜಾರಿ, ಬಾಲಕೃಷ್ಣ ಶೆಟ್ಟಿ, ವಿಜಯ ಕೊಡವೂರು, ಸಂತೋಷ್ ಜತ್ತನ್, ಮಾಜಿ ನಗರ ಸಭಾ ಸದಸ್ಯರು ಸುಬೇಧ ಹಾಗೂ ಪ್ರಮುಖರಾದ ಸರೋಜ ಶೆಣೈ, ನಿತ್ಯಾನಂದ ಶೆಟ್ಟಿ, ಮಾಯ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಕಿಶೋರ್ ಕುಮಾರ್ ಕರಂಬಳ್ಳಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಇತ್ತೀಚಿನ ಸುದ್ದಿ