ಹರ್ಯಾಣದಲ್ಲಿ ಮುಸ್ಲಿಮರಿಗೆ ಬೆದರಿಕೆ: ಸ್ಲಂ ತೊರೆಯಬೇಕೆಂದು ಪೋಸ್ಟರ್ ಮೂಲಕ ಬೆದರಿಕೆ..!

ಮತ್ತೊಂದು ಮತಾಂಧತೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹರ್ಯಾಣದ ಗುರ್ಗಾಂವ್ ನ ಸ್ಲಂಗಳಲ್ಲಿ ಇರುವ ಮುಸ್ಲಿಮರು ಕೂಡಲೇ ಸ್ಲಂಗಳನ್ನು ತೊರೆಯಬೇಕೆಂದು ಬೆದರಿಸಿ ಅಲ್ಲಲ್ಲಿ ಪೋಸ್ಟರ್‌ಗಳನ್ನು ಹಾಕಲಾಗಿದೆ.
ನೆರೆಯ ಜಿಲ್ಲೆಯಾದ ನೂಹ್‌ನಲ್ಲಿ ನಡೆದ ಹಿಂಸಾಚಾರದ ಬಳಿಕ ಗುರ್ಗಾಂವ್ ಗ್ರಾಮದಲ್ಲೂ ಉದ್ವಿಗ್ನತೆ ಹೆಚ್ಚಿದೆ. ಹೀಗಾಗಿ ಇಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಅಲ್ಲಲ್ಲಿ ಪೋಸ್ಟರ್‌ಗಳನ್ನು ಅಂಟಿಸಲಾಗಿದೆ. ಇತ್ತೀಚೆಗಷ್ಟೇ ಇಲ್ಲಿನ ಮುಸ್ಲಿಂ ಧಾರ್ಮಿಕ ಕೇಂದ್ರವೊಂದಕ್ಕೆ ಬೆಂಕಿ ಕೂಡಾ ಹಚ್ಚಲಾಗಿತ್ತು. ಅದರಲ್ಲಿ ಹೀಗೆ ಬರೆಯಲಾಗಿದೆ.
‘ಸ್ಲಂ ನಿವಾಸಿಗಳೇ, ನೀವು ಮನೆಗಳನ್ನು ಕೂಡಲೇ ಖಾಲಿ ಮಾಡಿ ಹೊರಡಬೇಕು. ಇಲ್ಲದಿದ್ದರೆ ನೀವು ಕೆಟ್ಟ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಗೌರವವನ್ನು ಉಳಿಸಲು ಬಯಸಿದ್ದರೆ, ನಿಮಗೆ ಇನ್ನು 2 ದಿನಗಳಿವೆ’ ಎಂದು ಪೋಸ್ಟರ್ ಅಂಟಿಸಲಾಗಿದೆ. ಈ ಸ್ಲಂಗಳಲ್ಲಿ ಬಹುತೇಕ ಮುಸ್ಲಿಮರೇ ವಾಸಿಸುತ್ತಿದ್ದಾರೆ.
ಈ ಕುರಿತು ಸ್ಥಳೀಯ ಪೊಲೀಸರು ಪೋಸ್ಟರ್‌ಗಳನ್ನು ತೆಗೆದು ಪ್ರಕರಣ ದಾಖಲಿಸಿದ್ದಾರೆ. ಆದರೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ.