ಇದೇ ಮೊದಲು: ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷರಾಗಿ ಜಯಾ ವರ್ಮಾ ನೇಮಕ; ರೈಲ್ವೆ ಇತಿಹಾಸದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆ - Mahanayaka
1:19 AM Wednesday 22 - October 2025

ಇದೇ ಮೊದಲು: ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷರಾಗಿ ಜಯಾ ವರ್ಮಾ ನೇಮಕ; ರೈಲ್ವೆ ಇತಿಹಾಸದಲ್ಲಿ ಪ್ರಮುಖ ಹುದ್ದೆ ಅಲಂಕರಿಸಿದ ಪ್ರಥಮ ಮಹಿಳೆ

01/09/2023

ಭಾರತೀಯ ರೈಲ್ವೆ ಮಂಡಳಿಯ ಸಿಇಒ ಮತ್ತು ಅಧ್ಯಕ್ಷರಾಗಿ ಜಯಾ ವರ್ಮಾ ಸಿನ್ಹಾ ನೇಮಕಗೊಂಡಿದ್ದಾರೆ. ಈ ಮೂಲಕ ರೈಲ್ವೆ ಸಚಿವಾಲಯದ 105 ವರ್ಷಗಳ ಇತಿಹಾಸದಲ್ಲಿ ಆ ಹುದ್ದೆಯನ್ನು ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಯ ಸಿನ್ಹಾ ಅವರು ಸೆಪ್ಟೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳುತ್ತಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಭಾರತೀಯ ರೈಲ್ವೆ ನಿರ್ವಹಣಾ ಸೇವೆಗಳು , ಸದಸ್ಯ (ಕಾರ್ಯಾಚರಣೆ ಮತ್ತು ವ್ಯಾಪಾರ ಅಭಿವೃದ್ಧಿ), ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಹುದ್ದೆಗೆ ಜಯ ವರ್ಮಾ ಸಿನ್ಹಾ ಅವರನ್ನು ನೇಮಕ ಮಾಡಲು ಸಂಪುಟದ ನೇಮಕಾತಿ ಸಮಿತಿ ಅನುಮೋದನೆ ನೀಡಿದೆ ಎಂದು ವರದಿ ಹೇಳಿದೆ.

ಜಯ ವರ್ಮಾ ಸಿನ್ಹಾ ಅವರು ಅನಿಲ್ ಕುಮಾರ್ ಲಹೋಟಿ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಅನಿಲ್ ಕುಮಾರ್ ಅವರ ಅಧಿಕಾರಾವಧಿಯು ಆಗಸ್ಟ್ 31, 2024 ರಂದು ಕೊನೆಗೊಂಡಿತು. ಸಿನ್ಹಾ ಅವರು ಅಕ್ಟೋಬರ್ 1 ರಂದು ನಿವೃತ್ತರಾಗಲಿದ್ದಾರೆ.

ಜಯ ವರ್ಮಾ ಸಿನ್ಹಾ ಅವರು ಭಾರತೀಯ ರೈಲ್ವೆ ಸಂಚಾರ ಸೇವೆಯ 1986 ರ ಬ್ಯಾಚ್ ಅಧಿಕಾರಿ. ಅವರು ಪ್ರಸ್ತುತ ರೈಲ್ವೆ ಮಂಡಳಿಯಲ್ಲಿ ಸದಸ್ಯ (ಕಾರ್ಯಾಚರಣೆ ಮತ್ತು ವ್ಯವಹಾರ ಅಭಿವೃದ್ಧಿ) ಸ್ಥಾನವನ್ನು ಹೊಂದಿದ್ದಾರೆ. ಸಿನ್ಹಾ ಅವರು ರೈಲ್ವೇ ಮಂಡಳಿಯ (ಸಂಚಾರ ಸಾರಿಗೆ) ಹೆಚ್ಚುವರಿ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಅಲಹಾಬಾದ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಯಾದ ಜಯಾ ವರ್ಮಾ ಸಿನ್ಹಾ ಅವರು 1988 ರಲ್ಲಿ ಭಾರತೀಯ ರೈಲ್ವೆ ಸಂಚಾರ ಸೇವೆಗೆ ಸೇರಿದ್ದರು. ಉತ್ತರ ರೈಲ್ವೆ, ಆಗ್ನೇಯ ರೈಲ್ವೆ ಮತ್ತು ಪೂರ್ವ ರೈಲ್ವೆ ಹೀಗೆ ಮೂರು ರೈಲ್ವೆ ವಲಯಗಳಲ್ಲಿ ಕೆಲಸ ಮಾಡಿದರು.

ಇತ್ತೀಚಿನ ಸುದ್ದಿ