ಅರಣ್ಯಕ್ಕೆ ಪತ್ನಿಯನ್ನೂ ಕರೆದುಕೊಂಡು ಹೋಗುತ್ತೀರಾ? | ಲಿಂಬಾವಳಿ ಕಾಲೆಳೆದ ರಮೇಶ್ ಕುಮಾರ್
04/02/2021
ಬೆಂಗಳೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಸದನದಲ್ಲಿಯೇ ಅರಣ್ಯ ಸಚಿವ ಅರವಿಂದ ಲಿಂಬಾವಳಿ ಅವರ ಕಾಲೆಳೆದಿದ್ದಾರೆದ್ದು, ಅರಣ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡುತ್ತಾ ಲಿಂಬಾವಳಿ ಅವರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ.
ವಿಧಾನಸಭಾ ಕಲಾಪದ ಶೂನ್ಯವೇಳೆಯಲ್ಲಿ ಮಲೆನಾಡು ಭಾಗದಲ್ಲಿ ಕಾಡು ಪ್ರಾಣಿಗಳ ಹಾವಳಿಗೆ ಸಂಬಂಧಿಸಿದ ಚರ್ಚೆ ನಡೆದಿದ್ದು, ಈ ಸಂದರ್ಭದಲ್ಲಿ ಲಿಂಬಾವಳಿ ಅವರು ಪ್ರಶ್ನೆಗಳಿಗೆ ಉತ್ತರಿಸಲು ಮುಂದಾಗಿದ್ದಾರೆ. ಈ ವೇಳೆ ರಮೇಶ್ ಕುಮಾರ್ ಅವರು ಮಧ್ಯ ಪ್ರವೇಶಿಸಿ, ಅರಣ್ಯಕ್ಕೆ ಹೋಗುವಾಗ ಒಬ್ಬರೇ ಹೋಗುತ್ತೀರಾ? ಇಲ್ಲ, ಪತ್ನಿಯನ್ನೂ ಕರೆದುಕೊಂಡು ಹೋಗುತ್ತೀರಾ? ಎಂದು ಕಾಲೆಳೆದಿದ್ದಾರೆ.
ಈ ಸಂದರ್ಭ ಅರವಿಂದ್ ಲಿಂಬಾವಳಿ ಅವರು ಕೂಡ ಪ್ರಶ್ನೆಯಷ್ಟೇ ನಾಜೂಕಿನ ಉತ್ತರ ನೀಡಿದ್ದು, ಪತ್ನಿ ಸಮೇತ ಕಾಡಿಗೆ ಹೋಗಲ್ಲ, ನಾನೊಬ್ಬನೇ ಹೋಗುತ್ತೇನೆ. ಅರಣ್ಯ ಜೊತೆಗೆ ಕನ್ನಡ ಸಂಸ್ಕೃತಿ ಇಲಾಖೆ ನೀಡಿದ್ದಾರೆ. ಇದರಿಂದಾಗಿ ಕಾಡಿನ ಜೊತೆಗೆ ನಾಡಿಗೂ ಬರಬೇಕಾಗುತ್ತದೆ ಎಂದು ಅವರು ಹಾಸ್ಯ ಚಟಾಕಿ ಹಾರಿಸಿದರು.


























