ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಕೊಂದ ಭಯೋತ್ಪಾದಕರಿಗೆ ಆಶ್ರಯ: ಇಬ್ಬರ ಬಂಧನ - Mahanayaka
1:30 PM Thursday 23 - October 2025

ಜಮ್ಮು ಮತ್ತು ಕಾಶ್ಮೀರದಲ್ಲಿ ನಾಗರಿಕರನ್ನು ಕೊಂದ ಭಯೋತ್ಪಾದಕರಿಗೆ ಆಶ್ರಯ: ಇಬ್ಬರ ಬಂಧನ

02/09/2023

ಈ ವರ್ಷದ ಜನವರಿ 1 ರಂದು ಜಮ್ಮು ಮತ್ತು ಕಾಶ್ಮೀರದ ರಾಜೌರಿಯ ಧಂಗ್ರಿ ಗ್ರಾಮದಲ್ಲಿ ಐದು ಜನರ ಸಾವಿಗೆ ಕಾರಣವಾದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರಿಗೆ ಆಶ್ರಯ ನೀಡಿದ ಇಬ್ಬರು ವ್ಯಕ್ತಿಗಳನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಶನಿವಾರ ಬಂಧಿಸಿದೆ.

ಎನ್ಐಎ ಪ್ರಕಾರ ಇಬ್ಬರು ಆರೋಪಿಗಳು ಎರಡು ತಿಂಗಳಿಗೂ ಹೆಚ್ಚು ಕಾಲ ಭಯೋತ್ಪಾದಕರಿಗೆ ಆಶ್ರಯದ ಮೂಲಕ ಬೆಂಬಲವನ್ನು ನೀಡಿದ್ದರು. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ (ಎಲ್ಇಟಿ) ಹ್ಯಾಂಡ್ಲರ್ ಗಳ ಆದೇಶದ ಮೇರೆಗೆ ಅವರು ನಿರ್ಮಿಸಿದ ಅಡಗುತಾಣದಲ್ಲಿ ಆಶ್ರಯ ಪಡೆದಿದ್ದರು ಎಂದು ಹೇಳಿದೆ.

ಈ ಪ್ರಕರಣದಲ್ಲಿ ಆರೋಪಿಗಳಾದ ನಿಸಾರ್ ಅಹ್ಮದ್ ಮತ್ತು ಮುಷ್ತಾಕ್ ಹುಸೇನ್ ಅವರನ್ನು ಎನ್ಐಎ ಗುರುವಾರ ಬಂಧಿಸಿದೆ ಎಂದು ಏಜೆನ್ಸಿಯ ಹೇಳಿಕೆ ತಿಳಿಸಿದೆ.
ಅವರನ್ನು ಶುಕ್ರವಾರ ಜಮ್ಮುವಿನ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು ಮತ್ತು ಕೆಲವು ದಿನಗಳ ಎನ್ಐಎ ಕಸ್ಟಡಿಗೆ ಕಳುಹಿಸಲಾಯಿತು. ಈ ಪ್ರಕರಣದ ಹೆಚ್ಚಿನ ತನಿಖೆ ಮುಂದುವರೆದಿದೆ.

ಇತ್ತೀಚಿನ ಸುದ್ದಿ