ಕಾಡಿನ ಹುಲಿಯಂತಿದ್ದ ಸಿದ್ದರಾಮಯ್ಯ ಈಗ್ಯಾಕೋ ಡಬ್ಬದ ಗಿಣಿಯಂತಾಗಿದ್ದಾರೆ: ವಾಟಾಳ್ ನಾಗರಾಜ್ - Mahanayaka
10:27 AM Saturday 15 - November 2025

ಕಾಡಿನ ಹುಲಿಯಂತಿದ್ದ ಸಿದ್ದರಾಮಯ್ಯ ಈಗ್ಯಾಕೋ ಡಬ್ಬದ ಗಿಣಿಯಂತಾಗಿದ್ದಾರೆ: ವಾಟಾಳ್ ನಾಗರಾಜ್

vatal nagaraj
03/09/2023

ಬೆಂಗಳೂರು: ಕಾಡಿನ ಹುಲಿಯಂತಿದ್ದ ಸಿದ್ದರಾಮಯ್ಯನವರು ಇತ್ತೀಚೆಗೆ ಡಬ್ಬದ ಗಿಣಿಯಂತಾಗಿದ್ದಾರೆ ಎಂದು  ಕನ್ನಡ ಪರ ಸಂಘಟನೆ ಮುಖಂಡ ವಾಟಾಳ್ ನಾಗರಾಜ್ ಹೇಳಿದ್ದಾರೆ.

ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಾಟಾಳ್ ನಾಗರಾಜ್,  ಸಿದ್ದರಾಮಯ್ಯನವರು ಒಳ್ಳೆಯ ವ್ಯಕ್ತಿ, ಕರ್ನಾಟಕ ರಾಜಕೀಯ ಇತಿಹಾಸದ  ಕೊನೆಯ ಅದ್ಭುತ ಕೊಂಡಿ ಅಂತ ನಾನು ಅಂದ್ಕೊಂಡಿದ್ದೇನೆ. ಅವರಲ್ಲಿ ಹಿಂದೆ ಇದ್ದ ಅಬ್ಬರ, ದಬಾಯಿಸುವ ಮಾತುಗಳು ಈಗ ಇಲ್ಲ ಎಂದು ಹೇಳಿದರು.

ಅವರು ಹಾಗೆ ಆಗಬಾರದು, ಕಾವೇರಿ ನೀರು ತಮಿಳುನಾಡಿಗೆ ಹರಿಯೋದನ್ನ ತಡೆಯಬೇಕು,  ಒಂದು ವೇಳೆ ನೀವು ತಡೆಯದಿದ್ದರೆ, ಕರ್ನಾಟಕದ ಜನ ನಿಮಗೆ ಶಾಪ ಹಾಕುತ್ತಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು.

ಕಾವೇರಿ ನೀರಿಗಾಗಿ ಕನ್ನಡಪರ ಸಂಘಟನೆಗಳು ವಿಧಾನ ಸೌಧಕ್ಕೆ ಮುತ್ತಿಗೆ ಹಾಕಬೇಕಾಗುತ್ತದೆ, ನೀವು ಗೋಲಿಬಾರ್ ಮಾಡಿದ್ರೂ, ರೈತರನ್ನ ಜೈಲಿಗೆ ಹಾಕಿದ್ರೂ, ಬಿಡೋದಿಲ್ಲ ಎಂದು ವಾಟಾಳ್ ನಾಗರಾಜ್ ಇದೇ ವೇಳೆ ಎಚ್ಚರಿಸಿದರು.

ಇತ್ತೀಚಿನ ಸುದ್ದಿ