ತನಾತನಿಸ್ ಗಳು ಮಾನವ ವಿರೋಧಿಗಳು: ನಟ ಪ್ರಕಾಶ್ ರಾಜ್

ಚೆನ್ನೈ: ತಮಿಳುನಾಡು ಸಿಎಂ ಪುತ್ರ ಹಾಗೂ ಸಚಿವ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿಕೆ ನೀಡಿರುವುದು ಬ್ರಾಹ್ಮಣ್ಯಪರ ವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಇದೀಗ ಈ ಬಗ್ಗೆ ನಟ ಪ್ರಕಾಶ್ ರಾಜ್ ಕೂಡ ಟ್ವೀಟ್ ಮಾಡಿದ್ದಾರೆ.
ಹಿಂದೂಗಳು ತನಾತನಿಸ್ ಅಲ್ಲ, ತನಾತನಿಸ್ ಗಳು ಮಾನವ ವಿರೋಧಿಗಳು ಎಂದು ಸನಾತನ ಪದ ಬಳಕೆ ಮಾಡದೆಯೇ ಅವರು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ದ್ರಾವಿಡ ನೆಲವಾದ ತಮಿಳುನಾಡು ಅಂಬೇಡ್ಕರ್ ಹಾಗೂ ಪೆರಿಯಾರ್ ವಿಚಾರಗಳಿಂದ ಪ್ರಭಾವಿತವಾಗಿದೆ. ಹಾಗಾಗಿ ತಮಿಳುನಾಡಿನಲ್ಲಿ ದ್ರಾವಿಡ ಸಿದ್ಧಾಂತವಾದಿಗಳು ಬ್ರಾಹ್ಮಣ್ಯ ಹಾಗೂ ಅದರ ಅಂಗಸಂಸ್ಥೆಗಳನ್ನು ಕಟು ಶಬ್ದಗಳಿಂದ ವಿರೋಧಿಸುತ್ತಿರುವುದು ಹೊಸದೇನಲ್ಲ, ಆದರೆ, ಲೋಕಸಭಾ ಚುನಾವಣೆ ಹೊತ್ತಿನಲ್ಲಿ ದೇಶದಲ್ಲಿ ಐಎನ್ ಡಿಐಎ(INDIA) ಮಿತ್ರಕೂಟದ ಭಾಗವಾಗಿರುವ ಸ್ಟಾಲಿನ್ ಅವರ ಡಿಎಂಕೆ ಪಕ್ಷದ ವಿರುದ್ಧ ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಅಸ್ತ್ರವಾಗಿ ಬಳಸಲಾಗುತ್ತಿದೆ. ಆದರೆ, ಸಾಕಷ್ಟು ಜನರಿಗೆ ಸದ್ಯ ನಡೆಯುತ್ತಿರುವ ಚರ್ಚೆ ಏನು ಎನ್ನುವುದೇ ತಿಳಿಯದೇ ಗೊಂದಲಕ್ಕೆ ಕಾರಣವಾಗಿದೆ.