ಮಲೆ ಮಹದೇಶ್ವರ ಬೆಟ್ಟದಲ್ಲಿ 9ನೇ ತರಗತಿಯ ವಿದ್ಯಾರ್ಥಿ ಮೇಲೆ ಕಾಡು ಹಂದಿ ದಾಳಿ - Mahanayaka

ಮಲೆ ಮಹದೇಶ್ವರ ಬೆಟ್ಟದಲ್ಲಿ 9ನೇ ತರಗತಿಯ ವಿದ್ಯಾರ್ಥಿ ಮೇಲೆ ಕಾಡು ಹಂದಿ ದಾಳಿ

chamarajanagara
05/09/2023

ಚಾಮರಾಜನಗರ: ಪ್ರಸಿದ್ಧ ಯಾತ್ರಸ್ಥಳವಾದ  ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ  ವಿದ್ಯಾರ್ಥಿಯೋರ್ವನ  ಮೇಲೆ  ಕಾಡು ಹಂದಿ ದಾಳಿ ನಡೆಸಿರುವ   ಘಟನೆ ಸೋಮವಾರ ಸಂಜೆ ಜರುಗಿದೆ.

ಹನೂರು  ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಿವಾಸಿ 9ನೇ ತರಗತಿಯ ನವೀನ್ ಗಾಯಗೊಂಡ ವಿದ್ಯಾರ್ಥಿ. ಶಾಲೆ ಬಿಟ್ಟ ಬಳಿಕ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ  ಹಳೆಯೂರು ಮುಖ್ಯ ರಸ್ತೆಯಲ್ಲಿ ಕಾಡು ಹಂದಿ ವಿದ್ಯಾರ್ಥಿಯ ಮೇಲೆ ದಾಳಿ ನಡೆಸಿ ಪರಾರಿಯಾಗಿದೆ.

ವಿದ್ಯಾರ್ಥಿಯ ಎಡಗಾಲಿಗೆ ತೀವ್ರ ಪೆಟ್ಟಾಗಿದ್ದು ಮಲೆಮಹದೇಶ್ವರ ಬೆಟ್ಟದಲ್ಲಿ ಚಿಕಿತ್ಸೆ ಕೊಡಲಾಗಿದೆ.

ಇತ್ತೀಚಿನ ಸುದ್ದಿ