ಬೈಕ್ ಸವಾರನಿಗೆ ಡಿಕ್ಕಿಯಾಗಿ ಪರಾರಿಯಾದ ಗಿಚ್ಚಿ ಗಿಲಿ-ಗಿಲಿ ಕಾಮಿಡಿ ಶೋ ನಟ ಚಂದ್ರ ಪ್ರಭಗೆ ಸೇರಿದ ಕಾರು! - Mahanayaka
2:02 PM Wednesday 27 - August 2025

ಬೈಕ್ ಸವಾರನಿಗೆ ಡಿಕ್ಕಿಯಾಗಿ ಪರಾರಿಯಾದ ಗಿಚ್ಚಿ ಗಿಲಿ–ಗಿಲಿ ಕಾಮಿಡಿ ಶೋ ನಟ ಚಂದ್ರ ಪ್ರಭಗೆ ಸೇರಿದ ಕಾರು!

prabudevu
06/09/2023


Provided by

ಚಿಕ್ಕಮಗಳೂರು: ಚಿಕ್ಕಮಗಳೂರು ನಗರದಲ್ಲಿ ಹಿಟ್ ಅಂಡ್ ರನ್ ಆಕ್ಸಿಡೆಂಟ್ ಕೇಸ್ ನಲ್ಲಿ ಗಿಚ್ಚಿ ಗಿಲಿ-ಗಿಲಿ ಕಾಮಿಡಿ ಶೋ ನಟ ಚಂದ್ರ ಪ್ರಭ ಎಂಬವರ ಹೆಸರು ಕೇಳಿ ಬಂದಿದೆ.

ನಗರದ ಸರ್ಕಾರಿ ಬಸ್ ನಿಲ್ದಾಣದ ಬಳಿ ಬೈಕಿಗೆ ಗುದ್ದಿದ ಕಾರೊಂದು ಎಸ್ಕೇಪ್ ಆಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. KA 51 MD 9552 ರಿಜಿಸ್ಟ್ರೇಷನ್ ನಂಬರ್ ಹೊಂದಿರುವ ಕಾರು ಚಂದ್ರಪ್ರಭಗೆ ಸೇರಿದ ಕಾರು ಎನ್ನಲಾಗಿದೆ.

ಅಪಘಾತ ಮಾಡಿ ಮಾನವೀಯತೆಗೂ ನಿಲ್ಲಿಸದೆ ಕಾರು ಎಸ್ಕೇಪ್ ಆಗಿದೆ. ಕಾರು ಗುದ್ದಿದ ಪರಿಣಾಮ ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ನಿವಾಸಿ ಮಾಲ್ತೇಶ್ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಾಲ್ತೇಶ್, ಕೆಲಸ ಮುಗಿಸಿ ಮನೆಗೆ ಹೋಗುತ್ತಿರುವಾಗ ಈ ಅಪಘಾತ ನಡೆದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಗಾಯಾಳು ಮಾಲ್ತೇಶ್ ಹಾಸನಕ್ಕೆ ರವಾನೆ ಮಾಡಲಾಗಿದೆ. ಗಾಯಾಳುವಿನ ಸಂಬಂಧಿಕರಿಂದ ಚಿಕ್ಕಮಗಳೂರು ನಗರದ ಟ್ರಾಫಿಕ್ ಠಾಣೆಗೆ ದೂರು ನೀಡಿದ್ದಾರೆ.

ಇತ್ತೀಚಿನ ಸುದ್ದಿ