ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ ಅಲ್ಲ, ಏಡ್ಸ್, ಕುಷ್ಠರೋಗ: ಡಿಎಂಕೆ ಸಂಸದ ಎ. ರಾಜಾ - Mahanayaka

ಸನಾತನ ಧರ್ಮ ಮಲೇರಿಯಾ, ಡೆಂಗ್ಯೂ ಅಲ್ಲ, ಏಡ್ಸ್, ಕುಷ್ಠರೋಗ: ಡಿಎಂಕೆ ಸಂಸದ ಎ. ರಾಜಾ

a raja
07/09/2023


Provided by

ನವದೆಹಲಿ: ಸನಾತನ ಧರ್ಮವನ್ನು ಮಲೇರಿಯಾ, ಡೆಂಗ್ಯೂ ಅಲ್ಲ, ಎಚ್ ಐವಿ(ಏಡ್ಸ್) ಮತ್ತು ಕುಷ್ಠರೋಗದಂತಹ ಸಾಮಾಜಿಕ ಕಳಂಕ ಹೊಂದಿರುವ ರೋಗಕ್ಕೆ ಹೋಲಿಸಬೇಕು ಎಂದು ಡಿಎಂಕೆ ಸಂಸದ ಎ. ರಾಜಾ ಗುರುವಾರ ಹೇಳಿಕೆ ನೀಡಿದ್ದಾರೆ.

ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ಮೃಧುವಾಗಿ ಮಾತನಾಡಿದ್ದಾರೆ. ಡೆಂಗ್ಯೂ, ಮಲೇರಿಯಾ ಸಾಮಾಜಿಕ ಪಿಡುಗು ಅಲ್ಲ. ಜನರು ಅದನ್ನು ಭಯದಿಂದ ನೋಡುವುದಿಲ್ಲ, ಕುಷ್ಠರೋಗ, ಎಚ್ ಐವಿಯನ್ನು ಅಸಹ್ಯಕರವಾಗಿ ನೋಡಲಾಗುತ್ತದೆ, ಆದ್ದರಿಂದ ಹೆಚ್ ಐವಿ ರೋಗದಂತಹ ಸಾಮಾಜಿಕ ಅವಸ್ಥೆಯ ಕಾಯಿಲೆಯಾಗಿ ನೋಡಬೇಕು ಎಂದು ಎ.ರಾಜಾ ಹೇಳಿದ್ದಾರೆ.

ಯಾರನ್ನಾದರೂ ಕರೆ ತನ್ನಿ ನಾನು ಸನಾತನ ಧರ್ಮದ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ, ನಾನು ದೆಹಲಿಗೆ ಪೆರಿಯಾರ್, ಅಂಬೇಡ್ಕರ್ ಪುಸ್ತಕಗಳೊಂದಿಗೆ ಚರ್ಚೆಗೆ ಬರುತ್ತೇನೆ. ಪ್ರಧಾನಿ ಸಭೆ ಕರೆದರೆ, ಎಲ್ಲಾ ಕ್ಯಾಬಿನೆಟ್ ಮಂತ್ರಿಗಳಿಗೆ ಉತ್ತರ ನೀಡಲು ನಾನು ಸಿದ್ಧನಿದ್ದೇನೆ ಎಂದು ಅವರು ಸವಾಲು ಹಾಕಿದ್ದಾರೆ.

ಇತ್ತೀಚಿನ ಸುದ್ದಿ