ದೇವಸ್ಥಾನದಲ್ಲಿ ಆರತಿಗೆ ಅಡ್ಡಿಪಡಿಸಿದ ಆರೋಪ: ಗಲಾಟೆ ಮಾಡಿದ ಮಧ್ಯಪ್ರದೇಶ ರಾಜಮನೆತನದ ಮಹಿಳೆಯ ಬಂಧನ - Mahanayaka

ದೇವಸ್ಥಾನದಲ್ಲಿ ಆರತಿಗೆ ಅಡ್ಡಿಪಡಿಸಿದ ಆರೋಪ: ಗಲಾಟೆ ಮಾಡಿದ ಮಧ್ಯಪ್ರದೇಶ ರಾಜಮನೆತನದ ಮಹಿಳೆಯ ಬಂಧನ

08/09/2023


Provided by

ಮಧ್ಯಪ್ರದೇಶದ ಪನ್ನಾದ ರಾಜಮನೆತನದ ಮಹಾರಾಣಿ ಜಿತೇಶ್ವರಿ ದೇವಿ ಅವರನ್ನು ದೇವಾಲಯದಲ್ಲಿ ಗಲಾಟೆ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ಭಗವಾನ್ ಜುಗಲ್ ಕಿಶೋರ್ ದೇವಾಲಯದ ಒಳಗೆ ಪೂಜೆಗೆ ಅಡ್ಡಿಪಡಿಸಿದ ಆರೋಪ ಅವರ ಮೇಲಿದೆ.

ದೇವಾಲಯದ ಅಧಿಕಾರಿಗಳ ಪ್ರಕಾರ, ಜಿತೇಶ್ವರಿ ದೇವಿ ದೇವಾಲಯದಲ್ಲಿ ನಡೆಯುತ್ತಿರುವ ಆರತಿಗೆ ಅಡ್ಡಿಪಡಿಸಲು ಪ್ರಯತ್ನಿಸಿದ್ದಾರೆ. ಅದನ್ನು ತನ್ನ ಸ್ವಂತ ಇಚ್ಛೆಯಂತೆ ಮಾಡಲು ಬಯಸಿದ್ದಾರಂತೆ. ಅಲ್ಲದೇ ಅವರು ದೇವಾಲಯದ ಗರ್ಭಗುಡಿಯನ್ನು ಪ್ರವೇಶಿಸಲು ಪ್ರಯತ್ನಿಸಿದಾಗ ಕೆಳಗೆ ಬಿದ್ದಿದ್ದಾಳೆ. ಇದು ಗದ್ದಲಕ್ಕೆ ಕಾರಣವಾಯಿತು. ಇದೇ ವೇಳೆ ಪೊಲೀಸರು ಅವರನ್ನು ದೇವಾಲಯದ ಆವರಣದಿಂದ ಹೊರಹೋಗುವಂತೆ ಹೇಳಿದ್ದಾರೆ. ಈ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಜಿತೇಶ್ವರಿ ದೇವಿ ದೇವಾಲಯದ ಅಧಿಕಾರಿಗಳು ಮತ್ತು ಪೊಲೀಸರ ನಡುವಿನ ವಾಗ್ವಾದವನ್ನು ನೋಡಬಹುದು.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295 ಎ ಮತ್ತು 353 ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಲಾಗಿದೆ. ಅಲ್ಲದೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಇದೇ ವೇಳೆ ಜಾಮೀನು ಅರ್ಜಿಯನ್ನು ನಿರಾಕರಿಸಿ ಆಕೆಯನ್ನು ಜೈಲಿಗೆ ಕಳುಹಿಸಲಾಗಿದೆ.

ರಾಜಮನೆತನದ ವಕೀಲ ಎಂ.ಎಲ್.ಅವಸ್ಥಿ ಅವರು ಶನಿವಾರ ಮತ್ತೆ ಜಾಮೀನಿಗೆ ಅರ್ಜಿ ಸಲ್ಲಿಸಲಿದ್ದಾರೆ. ತನ್ನ ಮೇಲೆ ಒತ್ತಡ ಹೇರಲಾಗಿದೆ ಎಂದು ಜಿತೇಶ್ವರಿ ದೇವಿ ಆರೋಪಿಸಿದ್ದಾರೆ. “ಪನ್ನಾದಲ್ಲಿ 65,000 ಕೋಟಿ ರೂ.ಗಳ ರಕ್ಷಣಾ ಕಲ್ಯಾಣ ನಿಧಿಯನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ಪ್ರಕರಣವು ನ್ಯಾಯಾಲಯದಲ್ಲಿದೆ” ಎಂದು ಅವರು ಆರೋಪಿಸಿದ್ದಾರೆ.

ಇತ್ತೀಚಿನ ಸುದ್ದಿ