ಬೆಂಗಳೂರು: ಖಾಸಗಿ ಸಾರಿಗೆ ಸಂಘಟನೆಗಳ ಪ್ರತಿಭಟನೆ ಹಿನ್ನೆಲೆ ಮಾರ್ಗ ಬದಲಿಸಲು ಸೂಚನೆ

ಬೆಂಗಳೂರು: ಸರ್ಕಾರದ ವಿರುದ್ಧ ಪ್ರತಿಭಟನೆ ಖಾಸಗಿ ಸಾರಿಗೆ ಸಂಘಟನೆಗಳಿಂದ ಇಂದು ನಗರದ ಏಳು ಕಡೆಗಳಿಂದ ಮೆರವಣಿಗೆ ಮೂಲಕ ಮೆಜೆಸ್ಟಿಕ್ ಗೆ ಆಗಮಿಸಿ ಮುತ್ತಿಗೆ ಹಾಕಲಿದ್ದಾರೆ. ಆಟೋ ಚಾಲಕರಿಗೆ ಕ್ಯಾಬ್ ಚಾಲಕರು, ಶಾಲಾ ವಾಹನಗಳ ಚಾಲಕರು ಕೂಡ ಬೆಂಬಲ ನೀಡಿದ್ದಾರೆ. ಮೊದಲ ರ್ಯಾಲಿ ಪೀಣ್ಯ ಎಸ್ ಆರ್ ಎಸ್ ಸಿಗ್ನಲ್ ಇಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಮಾರ್ಗದಲ್ಲಿ ಸಾಗಿ ಬರಲಿದೆ.
ಎರಡನೇ ರ್ಯಾಲಿ ಯಲಹಂಕ ಪೊಲೀಸ್ ಸ್ಟೇಷನ್ ಇಂದ, ಮೂರನೇ ರ್ಯಾಲಿ ವೈಟ್ ಫೀಲ್ಡ್ ಮಯೂರ ಬೇಕ್ರಿ ಸರ್ಕಲ್ ಇಂದ, ನಾಲ್ಕನೇ ರ್ಯಾಲಿ ಕೆಆರ್ ಪುರಂ ಐಟಿಐ ಗೇಟ್, ಐದನೆಯದು ಆನೇಕಲ್ ನಿಂದ, ಆರನೇ ರ್ಯಾಲಿ ಜಯನಗರ ಶಾಲಿನಿ ಗೌಂಡ್ ಹಾಗೂ ಏಳನೇ ರ್ಯಾಲಿ ರಾಜರಾಜೇಶ್ವರಿ ಆರ್ಚ್ ನಿಂದ ಹೊರಟು ರ್ಯಾಲಿಗಳು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸರ್ಕಲ್ ಒಟ್ಟಾಗಿ ಬಳಿಕ ಮೆಜಸ್ಟಿಕ್ ಗೆ ಆಗಮಿಸಲಿವೆ.
ಈ ಹಿನ್ನೆಲೆ ಪ್ರಯಾಣಿಕರ ಖಾಸಗಿ ವಾಹನ ಹಾಗೂ ಸರ್ಕಾರಿ ಬಸ್ ಸಂಚಾರಕ್ಕೆ ತೊಂದರೆ ಉಂಟಾಗಲ್ಲಿದ್ದು, ಬದಲಿ ಮಾರ್ಗವನ್ನು ಅನುಸರಿಸುವಂತೆ ಬೆಂಗಳೂರು ಸಂಚಾರ ಪೊಲೀಸರು ಮನವಿ ಮಾಡಿದ್ದಾರೆ.
> ಖೋಡೆ ಸರ್ಕಲ್ ಗೆ ಬರುವ ವಾಹನಗಳು: ಆರ್.ಆರ್. ಜಂಕ್ಷನ್ ಮೂಲಕ ಕೃಷ್ಣ ಸ್ಟೋರ್ – ಮಲ್ಲೇಶ್ವರಂ ಕಡೆಗೆ ಮಾರ್ಗ ಬದಲಾಯಿಸುವುದು.
> ಗೂಡ್ ಶೆಡ್ ರಸ್ತೆ ಕಡೆಯಿಂದ ಬರುವ ವಾಹನಗಳು: ಜಿ.ಟಿ.
ರಸ್ತೆ ಮುಖಾಂತರ ಸಂಗೊಳ್ಳಿ – ರಾಯಣ್ಣ ಸರ್ಕಲ್- ಓಕಳಿಪುರಂ – ಸುಜಾತ ಮೂಲಕ ಮುಂದೆ ಹೋಗುವುದು.
ರಸ್ತೆ ಮುಖಾಂತರ ಸಂಗೊಳ್ಳಿ – ರಾಯಣ್ಣ ಸರ್ಕಲ್- ಓಕಳಿಪುರಂ – ಸುಜಾತ ಮೂಲಕ ಮುಂದೆ ಹೋಗುವುದು. –
> ಆನಂದರಾವ್ ಸರ್ಕಲ್ ಕಡೆಯಿಂದ ಬರುವ ವಾಹನಗಳು: ಹಳೇ ಜೆ.ಡಿ.ಎಸ್. ರಸ್ತೆ ಹಾಗೂ ಶೇಷಾದ್ರಿಪುರಂ ರಸ್ತೆ ಕಡೆಗೆ ಹೋಗುವುದು.
> ಮೈಸೂರು ಬ್ಯಾಂಕಿನಿಂದ ಬರುವ ವಾಹನಗಳು: ಪ್ಯಾಲೇಸ್ ರಸ್ತೆ- ಮಹಾರಾಣಿ ಅಂಡರ್‌ಪಾಸ್- ಬಸವೇಶ್ವರ ಸರ್ಕಲ್ ಮುಖಾಂತರ ಸಂಚರಿಸುವಂತೆ ಸೂಚನೆ ನೀಡಲಾಗಿದೆ.