ಓಲಾ, ಉಬರ್ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ - Mahanayaka
12:54 AM Thursday 11 - September 2025

ಓಲಾ, ಉಬರ್ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ: ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್

d k shivakumar
11/09/2023

ಬೆಂಗಳೂರು:”ಖಾಸಗಿ ಬಸ್ ಮಾಲೀಕರಿಗೆ ಶಕ್ತಿ ಯೋಜನೆಯಿಂದ ತೊಂದರೆ ಆಗಿರುವುದು ನಿಜ. ಆದರೆ ಓಲಾ, ಉಬರ್ ಚಾಲಕರ ಪ್ರತಿಭಟನೆ ರಾಜಕೀಯ ಪ್ರೇರಿತ ಇರಬಹುದು” ಎಂದು ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.


Provided by

ಸದಾಶಿವ ನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಸೋಮವಾರ ಉತ್ತರಿಸಿದ ಅವರು “ಖಾಸಗಿ ಬಸ್ ಮಾಲೀಕರಿಗೆ ಆಗಿರುವ ತೊಂದರೆಯನ್ನು ಬಗೆಹರಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಆಟೋ ಚಾಲಕರು ತೊಂದರೆ ಅನುಭವಿಸುತ್ತಿದ್ದರೂ ಅದನ್ನು ಬಗಹರಿಸುತ್ತೇವೆ. ನಮಗೂ ಅದರ ಬಗ್ಗೆ ಅರಿವಿದೆ ಎಂದರು.

ಸರ್ಕಾರವನ್ನು ಹೆದರಿಸುವುದು, ಪ್ರಯಾಣಿಕರಿಗೆ ತೊಂದರೆ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ. ಸರ್ಕಾರ ಖಂಡಿತವಾಗಿ ಅವರ ಎಲ್ಲಾ ಸಮಸ್ಯೆಗಳನ್ನು ಕೇಳುತ್ತದೆ ಮತ್ತು ಸೂಕ್ತ ಪರಿಹಾರ ಒದಗಿಸುತ್ತದೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಒಳ್ಳೆಯದಾಗಿದೆಯಲ್ಲ” ಎಂದು ಹೇಳಿದರು.

ಇತ್ತೀಚಿನ ಸುದ್ದಿ