ಹೊಗೆನಕಲ್ ನಲ್ಲಿ ವಿಷ ಕುಡಿದ ಪ್ರೇಮಿಗಳು: ಯುವಕ ಸಾವು, ಯುವತಿಯ ಸ್ಥಿತಿ ಗಂಭೀರ - Mahanayaka
12:45 AM Sunday 7 - September 2025

ಹೊಗೆನಕಲ್ ನಲ್ಲಿ ವಿಷ ಕುಡಿದ ಪ್ರೇಮಿಗಳು: ಯುವಕ ಸಾವು, ಯುವತಿಯ ಸ್ಥಿತಿ ಗಂಭೀರ

sucide case
12/09/2023

ಚಾಮರಾಜನಗರ: ಪ್ರಸಿದ್ಧ ಪ್ರವಾಸಿ ಕೇಂದ್ರವಾದ ತಮಿಳುನಾಡು ಹಾಗೂ ಕರ್ನಾಟಕ ಗಡಿಯಲ್ಲಿರುವ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಪ್ರೇಮಿಗಳು ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ.


Provided by

ಉಮೇಶ್(24) ಮೃತಪಟ್ಟಿರುವ ಯುವಕನಾಗಿದ್ದು 16 ವರ್ಷದ ರಕ್ಷಿತಾ ಎಂಬಾಕೆ ತಮಿಳುನಾಡಿನ ಧರ್ಮಪುರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ದಾಖಲು ಮಾಡಲಾಗಿದೆ.

ಉಮೇಶ್ ಹಾಗೂ ರಕ್ಷಿತಾ ಕನಕಪುರ ಮೂಲದವರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದ್ದು ಹೊಗೆನಕಲ್ ಜಲಪಾತದ ಬಂಡೆಗಳ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಇವರಿಬ್ಬರು ಬಿದ್ದಿದ್ದನ್ನು ಗಮನಿಸಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ಕೊಟ್ಟಿದ್ದಾರೆ.‌

ವಿಷ ಕುಡಿದು ಬಹಳ ಸಮಯವಾಗಿದ್ದರಿಂದ ಉಮೇಶ್ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದು ರಕ್ಷಿತಾ ಸ್ಥಿತಿ ಚಿಂತಾಜನಕವಾಗಿದೆ. ತಮಿಳುನಾಡು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಇತ್ತೀಚಿನ ಸುದ್ದಿ