ಬೆಂಗಳೂರಿನಲ್ಲಿ ಕಡಿಮೆಯಾದ ಬೀದಿ ನಾಯಿಗಳ ಸಂಖ್ಯೆ - Mahanayaka

ಬೆಂಗಳೂರಿನಲ್ಲಿ ಕಡಿಮೆಯಾದ ಬೀದಿ ನಾಯಿಗಳ ಸಂಖ್ಯೆ

street dogs
15/09/2023


Provided by

ಬಿಬಿಎಂಪಿ ಮೂಲಗಳ ಪ್ರಕಾರ, ಬೆಂಗಳೂರಿನಲ್ಲಿ ಬೀದಿ ನಾಯಿಗಳ ಸಂಖ್ಯೆ 2.8 ಲಕ್ಷವಿದ್ದು 2019 ರಲ್ಲಿದ್ದ ಬೀದಿ ನಾಯಿಗಳ ಸಂಖ್ಯೆಗಿಂತ 31,000 ಕಡಿಮೆಯಾಗಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಡೆಸಿದ ಸಮೀಕ್ಷೆಯಲ್ಲಿ 2019 ರಿಂದ ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆ 31,000 ರಷ್ಟು ಕಡಿಮೆಯಾಗಿದೆ.

ಬೆಂಗಳೂರು ನಾಗರಿಕ ಸಂಸ್ಥೆಯು ಜುಲೈನಲ್ಲಿ ನಗರದಾದ್ಯಂತ 14 ದಿನಗಳ ಬೀದಿ ನಾಯಿ ಸಮೀಕ್ಷೆಯನ್ನು ಪ್ರಾರಂಭಿಸಿತು. 2019 ರಲ್ಲಿ ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಮುಂಚೆಯೇ ಇಂತಹ ಕೊನೆಯ ಸಮೀಕ್ಷೆಯನ್ನು ಕೈಗೊಳ್ಳಲಾಗಿದ್ದು, ಆಗ ಬೀದಿನಾಯಿಗಳ ಸಂಖ್ಯೆ 3.1 ಲಕ್ಷದಷ್ಟಿತ್ತು.ಬಿಬಿಎಂಪಿಯಿಂದ 50 ಹಾಗೂ ಪಶುಸಂಗೋಪನಾ ಇಲಾಖೆಯ 50 ಸಿಬ್ಬಂದಿ ಸೇರಿದಂತೆ ಒಟ್ಟು 100 ಸಿಬ್ಬಂದಿಯನ್ನು ಸಮೀಕ್ಷೆಗೆ ನಿಯೋಜಿಸಲಾಗಿತ್ತು. ಪ್ರತಿ ವಾರ್ಡ್ ನಲ್ಲಿ ಬೈಕ್ ಗಳಲ್ಲಿ ಸಿಬ್ಬಂದಿ ಸಮೀಕ್ಷೆ ನಡೆಸಿದ್ದು,ಬಿಬಿಎಂಪಿ ವ್ಯಾಪ್ತಿ 709 ಚದರ ಕಿ.ಮೀ ವಿಸ್ತಾರವಾಗಿದೆ ದಕ್ಷಿಣ ವಲಯ, ಪೂರ್ವ ವಲಯ ಮತ್ತು ಪಶ್ಚಿಮ ವಲಯಗಳಲ್ಲಿ ಗರಿಷ್ಠ ಸಂಖ್ಯೆಯ ನಾಯಿಗಳು ಕಂಡುಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂಟು ಎಂಟುವಲಯಗಳಲ್ಲಿ ಪೂರ್ವ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೀದಿ ನಾಯಿಗಳಿದ್ದು, ದಕ್ಷಿಣ ವಲಯ ಎರಡನೇ ಸ್ಥಾನದಲ್ಲಿದೆ. ಯಲಹಂಕದಲ್ಲಿ ಕಡಿಮೆ ಸಂಖ್ಯೆಯಲ್ಲಿ ಬೀದಿ ನಾಯಿಗಳಿದ್ದು ಕೊನೆಯ ಸ್ಥಾನದಲ್ಲಿದೆ.

2019ರಲ್ಲಿ ನಡೆಸಿದ ಬೀದಿನಾಯಿಗಳ ಸಮೀಕ್ಷೆಯಲ್ಲಿ ಒಟ್ಟು ನಾಯಿಗಳ ಸಂಖ್ಯೆಯ ಶೇ.54 ರಷ್ಟು ನಾಯಿಗಳಿಗೆ ಸಂತಾನಹರಣ ಚಿಕಿತ್ಸೆ ಮಾಡಲಾಗಿತ್ತು. ಈ ಬಾರಿ ಮಾಡಿರುವ ಸಮೀಕ್ಷೆಯ ಪ್ರಕಾರ ಬೆಂಗಳೂರಿನ ಒಟ್ಟು ಬೀದಿನಾಯಿಗಳ ಪೈಕಿ ಶೇ. 70ರಷ್ಟು ನಾಯಿಗಳಿಗೆ ಸಂತಾನ ಹರಣ ಚಿಕಿತ್ಸೆ ಮಾಡಲಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಶೇ.16 ರಷ್ಟು ಶಸ್ತ್ರ ಚಿಕಿತ್ಸೆ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

ಇನ್ನೂ 30 ಪ್ರತಿಶತ ಬೀದಿನಾಯಿಗಳಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವುದು ಬಾಕಿಇದ್ದು, ಮುಂದಿನ ಎರಡು-ಮೂರು ವರ್ಷಗಳಲ್ಲಿ ಸಂತಾನಹರಣ ಚಿಕಿತ್ಸೆ ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ