ನಾಟಕ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಕಲಾವಿದ ಸಾವು - Mahanayaka
7:56 AM Wednesday 27 - August 2025

ನಾಟಕ ಪ್ರದರ್ಶನದ ವೇಳೆ ವೇದಿಕೆಯಲ್ಲೇ ಕುಸಿದು ಬಿದ್ದು ಕಲಾವಿದ ಸಾವು

sharanu
15/09/2023


Provided by

ವಿಜಯಪುರ:  ನಾಟಕ ಪ್ರದರ್ಶನದ ವೇಳೆ ಯುವ ಕಲಾವಿದರೊಬ್ಬರು ವೇದಿಕೆಯಲ್ಲೇ ಕುಸಿದುಬಿದ್ದು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮದಲ್ಲಿ ನಡೆದಿದೆ.

ನಿನ್ನೆ ಕೋಟ್ಯಾಳ ಗ್ರಾಮದಲ್ಲಿ ಗ್ರಾಮ ದೇವತೆ ಮುಕ್ತಾಕರ ದೇವರ ಜಾತ್ರೆಯ ನಿಮಿತ್ತ ನಾಟಕ ಪ್ರದರ್ಶನ ಮಾಡಲಾಗಿತ್ತು. ನಾಟಕ ಪ್ರದರ್ಶನದ ವೇಳೆ ಹಾಸ್ಯ ಪಾತ್ರ ಮಾಡಿದ್ದ ಶರಣು ಬಾಗಲಕೋಟೆ(28) ಏಕಾಏಕಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಶರಣು ಕುಸಿದು ಬೀಳುತ್ತಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.  ಮೃತರು ಬಾಗಲಕೋಟ ಅಂಚೆ ಕಚೇರಿಯಲ್ಲಿ ಪೋಸ್ಟ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಶರಣು ಅವರು ಮೃತಪಟ್ಟ ಕಾರಣ ನಾಟಕ ಪ್ರದರ್ಶನ ರದ್ದುಗೊಳಿಸಲಾಯಿತು.

ಇತ್ತೀಚಿನ ಸುದ್ದಿ