ಚಾಮರಾಜನಗರ: ರಾಜ್ಯ, ತಮಿಳುನಾಡು ಸರ್ಕಾರದ  ಶವಯಾತ್ರೆ - Mahanayaka
12:06 AM Saturday 25 - October 2025

ಚಾಮರಾಜನಗರ: ರಾಜ್ಯ, ತಮಿಳುನಾಡು ಸರ್ಕಾರದ  ಶವಯಾತ್ರೆ

protest
20/09/2023

ಚಾಮರಾಜನಗರ: ಕಾವೇರಿ ನೀರನ್ನು ಬಿಡುತ್ತಿರುವುದನ್ನು ಖಂಡಿಸಿ ತಮಿಳುನಾಡು, ರಾಜ್ಯ ಸರ್ಕಾರದ ಶವಯಾತ್ರೆ ನಡೆಸಿ ಕಬ್ಬು ಬೆಳೆಗಾರರು ಚಾಮರಾಜನಗರದಲ್ಲಿ  ಆಕ್ರೋಶ ಹೊರಹಾಕಿದರು.

ಕಬ್ಬು ಬೆಳೆಗಾರರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಚಾಮರಾಜೇಶ್ವರ ದೇವಾಲಯದಿಂದ ಭುವನೇಶ್ವರಿ ವೃತ್ತದ ತನಕ ಚಟ್ಟ, ಬೆಂಕಿ ಹಿಡಿದು ಅಣಕು ಶವಯಾತ್ರೆ ನಡೆಸದರು. ರಾಷ್ಟ್ರೀಯ ಹೆದ್ದಾರಿ ತಡೆದು ಬಾಯಿ ಬಡಿದುಕೊಂಡು ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ರಾಜ್ಯದ ಶಾಸಕರು, ಸಂಸದರು ರೈತರ ಪಾಲಿಗೆ ಮೃತಪಟ್ಟಿದ್ದು ಅನ್ನದಾತರಿಗೆ ಆತ್ಮಹತ್ಯೆ ಭಾಗ್ಯವನ್ನು ಕೊಡುತ್ತಿದ್ದು ನಮ್ಮ ಪಾಲಿಗೆ ಮೃತಪಟ್ಟಿದ್ದಾರೆ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದರು, ರಸ್ತೆ ತಡೆ ನಡೆಸಿದ್ದರಿಂದ ಸಂಚಾರ ಅಸ್ತವ್ಯಸ್ತವಾಗಿತ್ತು.

ಇತ್ತೀಚಿನ ಸುದ್ದಿ