ಕಾವೇರಿದ ಮಧ್ಯಪ್ರದೇಶ ಚುನಾವಣೆ: 39 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ - Mahanayaka
7:59 PM Wednesday 17 - September 2025

ಕಾವೇರಿದ ಮಧ್ಯಪ್ರದೇಶ ಚುನಾವಣೆ: 39 ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ

25/09/2023

ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗೆ ಭಾರತೀಯ ಜನತಾ ಪಕ್ಷ (ಬಿಜೆಪಿ) 39 ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿಯು ಮೂವರು ಕೇಂದ್ರ ಸಚಿವರು ಸೇರಿದಂತೆ ಏಳು ಸಂಸತ್ ಸದಸ್ಯರನ್ನು ಕಣಕ್ಕಿಳಿಸಿದೆ. ಆಡಳಿತ ಪಕ್ಷವು ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ಅವರನ್ನು ದಿಮಾನಿಯಿಂದ, ಫಗ್ಗನ್ ಸಿಂಗ್ ಕುಲಸ್ತೆ ಅವರನ್ನು ನಿವಾಸ್ ನಿಂದ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್ ಅವರನ್ನು ನರಸಿಂಗಪುರದಿಂದ ಕಣಕ್ಕಿಳಿಸಿದೆ.


Provided by

ಸತ್ನಾದಿಂದ ಗಣೇಶ್ ಸಿಂಗ್, ಸಿಧಿಯಿಂದ ರಿತಿ ಪಾಠಕ್, ಗದರ್ವಾರಾದಿಂದ ಉದಯ್ ಪ್ರತಾಪ್ ಸಿಂಗ್ ಮತ್ತು ಜಬಲ್ಪುರ್ ಪಶ್ಚಿಮದಿಂದ ರಾಕೇಶ್ ಸಿಂಗ್ ಅವರಿಗೆ ಟಿಕೆಟ್ ನೀಡಲಾಗಿದೆ. ಪಕ್ಷದ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಕೂಡ ಇಂದೋರ್ ನ ಅಭ್ಯರ್ಥಿಯಾಗಿದ್ದಾರೆ.

ಕೇಂದ್ರದಿಂದ ಅನುಭವಿಗಳನ್ನು ರಾಜ್ಯಕ್ಕೆ ಕಳುಹಿಸುವ ಬಿಜೆಪಿಯ ಕ್ರಮ ಹೊಸದೇನಲ್ಲ. ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿ ಎಲ್ಲಾ ರಾಜಕೀಯ ಪಕ್ಷಗಳಿಗೆ ಕಠಿಣ ಸ್ಪರ್ಧೆ ಇದೆ ಎನ್ನಲಾಗಿದೆ.

ಇತ್ತೀಚಿನ ಸುದ್ದಿ