ಮಧ್ಯಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ: ರಕ್ತಸ್ರಾವ, ಅರೆಬೆತ್ತಲೆಯಾಗಿ ಬಿದ್ದಿದ್ರೂ ಸಹಾಯ ಮಾಡಲೇ ಇಲ್ಲ ಜನರು..! - Mahanayaka

ಮಧ್ಯಪ್ರದೇಶದಲ್ಲಿ ಬಾಲಕಿ ಮೇಲೆ ಅತ್ಯಾಚಾರ: ರಕ್ತಸ್ರಾವ, ಅರೆಬೆತ್ತಲೆಯಾಗಿ ಬಿದ್ದಿದ್ರೂ ಸಹಾಯ ಮಾಡಲೇ ಇಲ್ಲ ಜನರು..!

27/09/2023


Provided by

ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದೆ. ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಗಾಯಗೊಂಡು 12 ವರ್ಷದ ಬಾಲಕಿಯು ಅರೆಬೆತ್ತಲೆಯಾಗಿ ರಸ್ತೆಯಲ್ಲೇ ನರಳಾಡಿದ ಘಟನೆ ನಡೆದಿದೆ. ಆಕೆ ಸಹಾಯಕ್ಕಾಗಿ ಕೈ ಯಾಚಿಸಿದರೂ ಸ್ಥಳೀಯರು ಅವಳನ್ನು ದಿಟ್ಟಿಸಿ ನೋಡಿ ಹೋಗಿದ್ದಾರೆಯೇ ಹೊರತು ಯಾರೂ ಸಹಾಯ ಮಾಡಲಿಲ್ಲ.

ಮಧ್ಯಪ್ರದೇಶದ ಉಜ್ಜಯಿನಿಯಿಂದ ಸುಮಾರು 15 ಕಿ.ಮೀ ದೂರದಲ್ಲಿರುವ ಬಾದ್ನಗರ್ ರಸ್ತೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಹೃದಯ ವಿದ್ರಾವಕ ದೃಶ್ಯ ಸೆರೆಯಾಗಿದೆ.
ತೀವ್ರ ಗಾಯದಿಂದ ನರಳುತ್ತಿದ್ದ ಬಾಲಕಿಯನ್ನು ಇಂದೋರ್ ಗೆ ವರ್ಗಾಯಿಸಲಾಯಿತು. ರಕ್ತ ಅಗತ್ಯವಿದ್ದುದರಿಂದ ಪೊಲೀಸರೇ ರಕ್ತದಾನ ಮಾಡಿದರು. ಕೂಡಲೇ ಪೊಲೀಸರು ಅಪರಾಧಿಗಳ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯನ್ನು ಜಾರಿಗೊಳಿಸಿದರು. ದುಷ್ಕರ್ಮಿಗಳ ಗುರುತಿಸುವಿಕೆ ಮತ್ತು ಬಂಧನವನ್ನು ತ್ವರಿತಗೊಳಿಸಲು ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸುವುದಾಗಿ ಉಜ್ಜಯಿನಿ ಪೊಲೀಸ್ ಮುಖ್ಯಸ್ಥ ಸಚಿನ್ ಶರ್ಮಾ ಘೋಷಿಸಿದ್ದಾರೆ.

ಅಪರಾಧಿಗಳ ಸಂಬಂಧಿತ ಮಾಹಿತಿ ಇದ್ದರೆ ಅಧಿಕಾರಿಗಳಿಗೆ ತಿಳಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ವಿಪರೀತ ಗಾಯದಿಂದ ಹುಡುಗಿಗೆ ಮಾತನಾಡುವುದಕ್ಕೆ ಆಗುತ್ತಿಲ್ಲ. “ಹುಡುಗಿಗೆ ತನ್ನ ನಿಖರವಾದ ಸ್ಥಳವನ್ನು ಗುರುತಿಸಲು ಸಾಧ್ಯವಾಗಲಿಲ್ಲ, ಆದರೆ ಅವಳ ಉಚ್ಚಾರಣೆ ಅವಳ ಮೂಲವನ್ನು ಉತ್ತರ ಪ್ರದೇಶದ ಪ್ರಯಾಗ್ರಾಜ್ ಎಂದು ಸೂಚಿಸುತ್ತದೆ” ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ