ಕರ್ನಾಟಕ ಬಂದ್ ನಿಂದ ತಮಿಳುನಾಡು ಗಡಿಯಲ್ಲಿ ಹೈಅಲರ್ಟ್ - Mahanayaka

ಕರ್ನಾಟಕ ಬಂದ್ ನಿಂದ ತಮಿಳುನಾಡು ಗಡಿಯಲ್ಲಿ ಹೈಅಲರ್ಟ್

chamarajanagara
29/09/2023


Provided by

ಚಾಮರಾಜನಗರ : ಕರ್ನಾಟಕ ಬಂದ್ ನಿಂದ ತಮಿಳುನಾಡು ಗಡಿಯಲ್ಲಿ ಎಚ್ಚರವಹಿಸಲಾಗಿದೆ. ಬಂದ್ ಹಿನ್ನೆಲೆ ತಮಿಳುನಾಡು ವಾಹನಗಳನ್ನು ಕರ್ನಾಟಕಕ್ಕೆ ಪೊಲೀಸರು ಬಿಡುತ್ತಿಲ್ಲ.  ಚಾಮರಾಜನಗರದಲ್ಲಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದಿದ್ದರಿಂದ ತಮಿಳುನಾಡು ಪೊಲೀಸರು ಎಚ್ಚೆತ್ತುಕೊಂಡಿದ್ದು, ಚಾಮರಾಜನಗರ ಜಿಲ್ಲೆಯೊಳಗೆ ತಮಿಳುನಾಡು ನೊಂದಣಿಯ ವಾಹನಗಳು‌ ಸೇರಿದಂತೆ ಎಲ್ಲಾ ವಾಹನಗಳ  ಸಂಚಾರ ನಿಷೇಧ ಮಾಡಲಾಗಿದೆ.

ತಮಿಳುನಾಡಿನ ಬಣ್ಣಾರಿ ಚೆಕ್ ಪೋಸ್ಟ್ ನಲ್ಲಿ ಕಿ.ಮೀ.ಗಟ್ಟಲೇ ವಾಹನಗಳು ಸರತಿ ಸಾಲುಗಳಲ್ಲಿ ನಿಂತಿವೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ತಾಳವಾಡಿ ಸಮೀಪದ ರಾಂಪುರಂ, ಎಲ್ಲೆಕಟ್ಟೆ, ಕುಂಬಾರಗುಂಡಿ, ಅರಳವಾಡಿ ಕಡೆ ಪೊಲೀಸ್ ಬಂದೋಬಸ್ತ್  ವಹಿಸಲಾಗಿದೆ. ಸೂಕ್ಷ್ಮ ಪ್ರದೇಶವಾದ್ದರಿಂದ ಎರಡೂ ರಾಜ್ಯದ ಪೊಲೀಸರು ಅಲರ್ಟ್ ಆಗಿದ್ದಾರೆ.

ಇತ್ತೀಚಿನ ಸುದ್ದಿ