ಶಿವಾಜಿ ಮಹಾರಾಜರು ಬಳಸಿದ್ದ ಆಯುಧ 'ವಾಘ ನಖ್' ಕೊನೆಗೂ ಭಾರತಕ್ಕೆ: ಏನಿದರ ಹಿನ್ನೆಲೆ ಗೊತ್ತಾ..? - Mahanayaka
11:09 AM Tuesday 21 - October 2025

ಶಿವಾಜಿ ಮಹಾರಾಜರು ಬಳಸಿದ್ದ ಆಯುಧ ‘ವಾಘ ನಖ್’ ಕೊನೆಗೂ ಭಾರತಕ್ಕೆ: ಏನಿದರ ಹಿನ್ನೆಲೆ ಗೊತ್ತಾ..?

01/10/2023

ಬಿಜಾಪುರ ಸುಲ್ತಾನ್ ಸೇನಾಧಿಪತಿ ಅಫ್ಜಲ್ ಖಾನ್ ನ ಹತ್ಯೆಗೆ ಛತ್ರಪತಿ ಶಿವಾಜಿ ಮಹಾರಾಜರು ಬಳಸಿದ್ದ ‘ವಾಘ ನಖ್’ ಎಂಬ ಆಯುಧವು ಲಂಡನ್ ನಿಂದ ಭಾರತಕ್ಕೆ ವಾಪಸ್ ಬರಲಿದೆ. ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅವರ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್‌ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಹುಲಿ ಪಂಜದ ಆಯುಧವನ್ನು ಮರಳಿ ಭಾರತಕ್ಕೆ ತರಲಾಗುತ್ತಿದೆ.

ವಾಘ ನಖ ವಾಪಸ್ ತರಿಸಿಕೊಳ್ಳುವ ಪ್ರಕ್ರಿಯೆ ಪೂರೈಸಲು ಮಹಾರಾಷ್ಟ್ರ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಮಂಗಳವಾರ ಲಂಡನ್‌ಗೆ ಆಗಮಿಸಲಿದ್ದಾರೆ. ಈ ವೇಳೆ ಅವರು ಮ್ಯೂಸಿಯಮ್ ಜತೆಗೆ ಒಪ್ಪಂದಕ್ಕೆ ಅಂಕಿತ ಹಾಕಲಿದ್ದಾರೆ ಎನ್ನಲಾಗಿದೆ.

ಮೊದಲ ಹಂತದಲ್ಲಿ ನಾವು ವಾಘ ನಖ ಆಯುಧವನ್ನು ವಾಪಸ್ ತರುತ್ತಿದ್ದೇವೆ. ಇದಕ್ಕಾಗಿ ತಿಳಿವಳಿಕಾ ಒಪ್ಪಂದಕ್ಕೆ ಅಂಕಿತ ಹಾಕುತ್ತಿದ್ದು, ಮುಂದಿನ ತಿಂಗಳು ಭಾರತಕ್ಕೆ ಬರಲಿದೆ. ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಬಗೆದ ದಿನದಂದೇ ಆಯುಧವನ್ನು ವಾಪಸ್ ಕರೆ ತರುವುದು ನಮ್ಮ ಪ್ರಯತ್ನವಾಗಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ