ಸ್ವಚ್ಚ ಪರಿಸರ ಅಭಿಯಾನ : ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಬಕೆಟ್ ವಿತರಣೆ - Mahanayaka
6:30 PM Tuesday 16 - September 2025

ಸ್ವಚ್ಚ ಪರಿಸರ ಅಭಿಯಾನ : ಕಥೊಲಿಕ್ ಸಭಾ ಉಡುಪಿ ಪ್ರದೇಶ ವತಿಯಿಂದ ಬಕೆಟ್ ವಿತರಣೆ

swachate
02/10/2023

ಉಡುಪಿ: ಗಾಂಧಿ ಜಯಂತಿ ಪ್ರಯುಕ್ತ ಉಡುಪಿ ನಗರಸಭೆ ಹಾಗೂ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಜಂಟಿ ಸಹಯೋಗದಲ್ಲಿ ಸ್ವಚ್ಚ ಪರಿಸರ ಅಭಿಯಾನದಡಿಯಲ್ಲಿ ಉಡುಪಿ  ಮೀನು ಮಾರುಕಟ್ಟೆಯ ಗ್ರಾಹಕರಿಗೆ ಪಾಲಿಥಿನ್ ಬ್ಯಾಗ್ ಬದಲು ಬಕೆಟ್ ಗಳನ್ನು ಸೋಮವಾರ ವಿತರಿಸುವ ಮೂಲಕ ಜಾಗೃತಿ ಮೂಡಿಸಲಾಯಿತು.


Provided by

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಡುಪಿ ನಗರಸಭಾ ಆಯುಕ್ತರಾದ ರಾಯಪ್ಪ ಮಾತನಾಡಿ ಇಂದು ಪ್ರತಿಯೊಬ್ಬರು ಸಾಮಾಗ್ರಿಗಳನ್ನು ಖರೀದಿಸಿಲು ಪ್ಲಾಸ್ಟೀಕ್ ಚೀಲಗಳನ್ನೇ ಬಳಸುತ್ತಿದ್ದಾರೆ. ಅದರಲ್ಲೂ ಮೀನು ಖರೀದಿಸಲು ಬರುವ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿರುವುದು ಕಂಡು ಬಂದಿದೆ ಇದರಿಂದ ನಗರದಾದ್ಯಂತ ಪ್ಲಾಸ್ಟಿಕ್ ಚೀಲದ ತ್ಯಾಜ್ಯ ಹೆಚ್ಚುತ್ತಿದೆ. ಇದಕ್ಕೆ ಮುಕ್ತಿ ಹಾಡುವ ನಿಟ್ಟಿನಲ್ಲಿ ಗ್ರಾಹಕರಿಗೆ ಪ್ಲಾಸ್ಟಿಕ್ ಬಕೆಟ್ ಗಳನ್ನು ನೀಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಪರಿಸರಯೋಗ್ಯವಾದ ಚೀಲಗಳನ್ನು ವಿತರಿಸಲು ನಗರಸಭೆ ಕ್ರಮ ಕೈಗೊಳ್ಳಲಿದೆ ಎಂದರು.

ಇದೇ ವೇಳೆ ಮಾತನಾಡಿದ ಕಥೊಲಿಕ್ ಸಭಾ ಉಡುಪಿ ಪ್ರದೇಶ ಇದರ ಅಧ್ಯಕ್ಷರಾದ ನಮ್ಮ ಸಂಘಟನೆ ಕಳೆದ ಹಲವು ವರುಷಗಳಿಂದ ಸ್ವಚ್ಚ ಪರಿಸರದ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬಂದಿದ್ದು, ಈ ವರ್ಷ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಅಭಿಯಾನ ಆಯೋಜಿಸಿದೆ. ಪ್ಲಾಸ್ಟಿಕ್ ಚೀಲಗಳು ಮಣ್ಣಿನಲ್ಲಿ ಸುಲಭವಾಗಿ ಕರಗುವುದಿಲ್ಲ ಇದರ ತ್ಯಾಜ್ಯದಿಂದ ಆಗುತ್ತಿರುವ ಸಮಸ್ಯೆಯನ್ನು ಅರಿತುಕೊಂಡು ಮೀನು ಖರೀದಿಸಿ ಬರುವ ಗ್ರಾಹಕರು ಪ್ಲಾಸ್ಟಿಕ್ ಚೀಲದ ಬದಲು ಬಕೆಟ್ ಗಳನ್ನು ಉಪಯೋಗಿಸಿದರೆ ಸ್ವಲ್ಪ ಮಟ್ಟಿನ ತ್ಯಾಜ್ಯವನ್ನು ಕಡಿಮೆ ಮಾಡಿದ ಸಂತೃಪ್ತಿ ನಮ್ಮದಾಗಿದೆ. ಸಾರ್ವಜನಿಕರು ಪ್ಲಾಸ್ಟಿಕ್ ಚೀಲದ ಬದಲು ಪರಿಸರಕ್ಕೆ ಯೋಗ್ಯವಾದ ಚೀಲಗಳನ್ನು ಉಪಯೋಗಿಸುವಂತಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಕಥೊಲಿಕ್ ಸಭಾ ಮಾಜಿ ಅಧ್ಯಕ್ಷರಾದ ಆಲ್ಫೋನ್ಸ್ ಡಿಕೋಸ್ತಾ ಕಾರ್ಯಕ್ರಮದ ಕುರಿತು ಮಾತನಾಡಿದರು.

ಕಥೊಲಿಕ್ ಸಭಾ ನಿಯೋಜಿತ ಅಧ್ಯಕ್ಷರಾದ ರೊನಾಲ್ಡ್ ಆಲ್ಮೇಡಾ, ಮಾಜಿ ಅಧ್ಯಕ್ಷರಾದ ವಲೇರಿಯನ್ ಫೆರ್ನಾಂಡಿಸ್, ಡಾ. ಜೆರಾಲ್ಡ್ ಪಿಂಟೊ, ಕೋಶಾಧಿಕಾರಿ ಜೆರಾಲ್ಡ್ ರೊಡ್ರಿಗಸ್, ಪದಾಧಿಕಾರಿಗಳಾದ ಮೆಲ್ವಿನ್ ಆರಾನ್ಹಾ, ಲೆಸ್ಲಿ ಕರ್ನೆಲಿಯೊ, ಜುಲಿಯೆಟ್ ಡಿಸೋಜಾ, ನಗರಸಭೆಯ ಅಧಿಕಾರಿಗಳಾದ ಶಶಿರೇಖಾ, ಸ್ನೇಹಾ ಕೆ, ಗಿರಿಧರ್ ಆಚಾರ್ಯ, ಉಡುಪಿ ಹಸಿ ಮೀನು ಮಾರಾಟ ಸಂಘದ ಅಧ್ಯಕ್ಷರಾದ ಬೇಬಿ ಸಾಲ್ಯಾನ್, ಸಾಮಾಜಿಕ ಕಾರ್ಯಕರ್ತ ಜೋಸೆಫ್ ರೆಬೆಲ್ಲೊ ಹಾಗೂ ಇತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ