ಪ್ರವೇಶ ನಿಷೇಧಿತ ಅರಣ್ಯದಲ್ಲಿ ಹುಣ್ಣಿಮೆಯಂದು ವಾಮಾಚಾರ!!! - Mahanayaka
2:02 PM Tuesday 16 - September 2025

ಪ್ರವೇಶ ನಿಷೇಧಿತ ಅರಣ್ಯದಲ್ಲಿ ಹುಣ್ಣಿಮೆಯಂದು ವಾಮಾಚಾರ!!!

black magic
02/10/2023

ಚಾಮರಾಜನಗರ:‌ ವನ್ಯಜೀವಿ ಓಡಾಡುವ ಸ್ಥಳದಲ್ಲಿ ಕಳೆದ ಹುಣ್ಣಿಮೆಯಂದು ಕಾಡಿನಲ್ಲಿ ವಾಮಚಾರ ನಡೆಸಿರುವ ಘಟನೆ ಹನೂರು ತಾಲೂಕಿನ ಅರಕನಹಳ್ಳ ಎಂಬಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.


Provided by

ಹನೂರು ಹಾಗೂ ಅಜ್ಜೀಪುರ ರಸ್ತೆ ಬದಿಯ ಅರಣ್ಯ ಪ್ರದೇಶದಲ್ಲಿ ಹರಿಯುವ ಅರಕೆಹಳ್ಳ ಎಂಬ ಜಾಗದಲ್ಲಿ ಕೆಲವರು ವಾಮಾಚಾರ ನಡೆಸಿ ತೆರಳಿದ್ದಾರೆ. ಮಲೆಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಹನೂರು ಬಫರ್ ವಲಯಕ್ಕೆ ಈ ಹಳ್ಳ ಬರಲಿದ್ದು ವನ್ಯಜೀವಿ ಸಂಚಾರ ಇರಲಿದೆ. ಜೊತೆಗೆ, ಸಾರ್ವಜನಿಕರ ನಿಷೇಧಿತ ಪ್ರದೇಶವೂ ಆಗಿದ್ದು ಆನೆ, ಕಾಡುಹಂದಿ, ಕೋತಿಗಳ ಸಂಚಾರ ಸರ್ವೇ ಸಾಮಾನ್ಯವಾಗಿರಲಿದೆ.

ಅರಣ್ಯಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ವಾಮಾಚಾರ ನಡೆಸಿದ್ದು ಅರಣ್ಯ ಇಲಾಖೆ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಇನ್ನಾದರೂ, ವಾಮಚಾರಿಗಳಿಗೆ ಬಿಸಿ ಮುಟ್ಟಿಸುವ ಕೆಲಸ ಆಗಬೇಕಿದೆ.

ಇತ್ತೀಚಿನ ಸುದ್ದಿ