ಅಪ್ಪನ ಜೊತೆಗೆ ಸೂಪರ್ ಮಾರ್ಕೆಟ್ ಗೆ ಹೋದ್ಳು ಮಗಳು: ಚಾಕಲೇಟ್ ತೆಗೆಯೋ ವೇಳೆ ನಡೀತು ಅವಘಡ; ಕಣ್ಣೀರು ತರಿಸುತ್ತೆ ಈ ಕಹಾನಿ..! - Mahanayaka
10:59 AM Saturday 23 - August 2025

ಅಪ್ಪನ ಜೊತೆಗೆ ಸೂಪರ್ ಮಾರ್ಕೆಟ್ ಗೆ ಹೋದ್ಳು ಮಗಳು: ಚಾಕಲೇಟ್ ತೆಗೆಯೋ ವೇಳೆ ನಡೀತು ಅವಘಡ; ಕಣ್ಣೀರು ತರಿಸುತ್ತೆ ಈ ಕಹಾನಿ..!

03/10/2023


Provided by

ಸೂಪರ್ ಮಾರ್ಕೆಟ್ ನಲ್ಲಿ ಚಾಕಲೇಟ್‌ ತೆಗೆದುಕೊಳ್ಳಲು ರೆಫ್ರಿಜರೇಟರ್‌ ಬಾಗಿಲನ್ನು ತೆಗೆಯಲು ಯತ್ನಿಸಿದ್ದ ವೇಳೆ ವಿದ್ಯುತ್‌ ತಗುಲಿ ಬಾಲಕಿಯೊಬ್ಬಳು ಸಾವನ್ನಪ್ಪಿದ ಘಟನೆ ಹೈದರಾಬಾದ್‌ನ ಸೂಪರ್‌ ಮಾರ್ಕೆಟ್‌ನಲ್ಲಿ ನಡೆದಿದೆ.

ನಿಜಾಮಾಬಾದ್ ಜಿಲ್ಲೆಯ ನವಿಪೇಟ್ ಮಂಡಲದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ರಿಷಿತಾ (4) ಮೃತ ದುರ್ದೈವಿ. ರಿಷಿತಾ ತನ್ನ ತಂದೆ ರಾಜಶೇಖರ್‌ನೊಂದಿಗೆ ಸೂಪರ್‌ ಮಾರ್ಕೆಟ್‌ಗೆ ತೆರಳಿದ್ದಳು. ಈ ವೇಳೆ ರಾಜಶೇಖರ್‌ ಐಸ್‌ಕ್ರಿಂಗಾಗಿ ಫ್ರಿಡ್ಜ್‌ನಲ್ಲಿ ಹುಡುಕುತ್ತಿದ್ದರು. ಈ ವೇಳೆ ರಿಷಿಕಾಗೆ ಪಕ್ಕದ ಫ್ರಿಡ್ಜ್‌ನಲ್ಲಿ ಚಾಕಲೇಟ್‌ಗಳು ಇರುವುದು ಕಂಡಿದೆ. ಇದರಿಂದಾಗಿ ಆಸೆಯಿಂದ ಆ ಫ್ರಿಡ್ಜ್‌ನ ಬಾಗಿಲನ್ನು ತೆಗೆದಿದ್ದಾಳೆ. ಈ ವೇಳೆ ರಿಷಿಕಾಗೆ ವಿದ್ಯುತ್‌ ಶಾಕ್‌ ತಗುಲಿದೆ.

ಈ ವೇಳೆ ರಾಜಶೇಖರ್‌ ಅಲ್ಲೇ ಇದ್ದರೂ ಅವರ ಅರಿವಿಗೆ ಬಂದಿರಲಿಲ್ಲ. ಆದರೆ ಕೆಲ ಸೆಕೆಂಡ್‌ಗಳ ನಂತರ ರಾಜಶೇಖರ್‌ ತಮ್ಮ ಮಗಳ ಬಳಿ ಬಂದಾಗ ಆಕೆಗೆ ಪ್ರಜ್ಞೆ ಇಲ್ಲದ್ದನ್ನು ಗಮನಿಸಿ ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಲ್ಲಿ ವೈದ್ಯರು ರಿಷಿಕಾ ಮೃತಪಟ್ಟಿರುವುದಾಗಿ ಘೋಷಿಸಿದರು.

ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಘಟನೆಗೆ ಸಂಬಂಧಿಸಿ ರಿಷಿಕಾ ಪೋಷಕರು ಮತ್ತು ಇತರ ಸಂಬಂಧಿಕರು ಸೂಪರ್ ಮಾರ್ಕೆಟ್ ಎದುರು ಆಕೆಯ ಶವದೊಂದಿಗೆ ಪ್ರತಿಭಟನೆ ನಡೆಸಿದರು. ಸೂಪರ್‌ ಮಾರ್ಕೆಟ್‌ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಘಟನೆ ಕುರಿತು ಸ್ಥಳೀಯ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ