ದಟ್ಟ ಮಂಜು ಕವಿದ ವಾತಾವರಣ: ರಸ್ತೆ ಕಾಣದೇ ಆಟೋ ಪಲ್ಟಿ

03/10/2023
ಕೊಟ್ಟಿಗೆಹಾರ: ಇಲ್ಲಿನ ಅತ್ತಿಗೆರೆ ಗ್ರಾಮದ ಬಳಿ ರಾಷ್ಟೀಯ ಹೆದ್ದಾರಿಯಲ್ಲಿ ಮಂಜು ಮುಸುಕಿದ ವಾತಾವರಣದಿಂದ ರಸ್ತೆ ಕಾಣದೇ ಆಟೋ ಗದ್ದೆಗೆ ಪಲ್ಟಿಯಾದ ಘಟನೆ ಬೆಳಿಗ್ಗೆ ನಡೆದಿದೆ.
ಬೆಳ್ತಂಗಡಿ ನಿವಾಸಿ ನಜೀರ್ ಕುಟುಂಬ ಜಾವಗಲ್ ನಿಂದ ಬೆಳ್ತಂಗಡಿಗೆ ತೆರಳುತ್ತಿದ್ದರು. ಈ ವೇಳೆ ಅತ್ತಿಗೆರೆ ಬಳಿ ರಸ್ತೆ ಕಾಣದೇ ಆಟೋ ಗದ್ದೆಗೆ ಪಲ್ಟಿಯಾಗಿದ್ದು, ಚಾಲಕ ನಜೀರ್ ಆಟೋದಲ್ಲಿ ಸಿಕ್ಕಿ ಹಾಕಿಕೊಂಡಿದ್ದು, ಅವರನ್ನು ಬಣಕಲ್ ಸಮಾಜ ಸೇವಕ ಮೊಹಮ್ಮದ್ ಆರೀಫ್ ಹಾಗೂ ಸ್ಥಳೀಯರು ರಕ್ಷಣೆ ಮಾಡಿ ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅವರ ಕುಟುಂಬದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಈ ಘಟನೆ ಬಣಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.