ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಸಹೋದರಿಯರು! - Mahanayaka

ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಸಹೋದರಿಯರು!

mangalore news
04/10/2023


Provided by

ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಲ್ಲಿ ನಡೆದಿದೆ. ಕದ್ರಿ ಕಂಬಳದ ಚಂದ್ರಿಕಾ ಬಡಾವಣೆಯಲ್ಲಿ ವಾಸವಾಗಿದ್ದ ಲತಾ ಭಂಡಾರಿ (70) ಮತ್ತು ಸುಂದರಿ ಶೆಟ್ಟಿ (80) ಎಂಬ ಸಹೋದರಿಯರು ಆತ್ಮಹತ್ಯೆ ಮಾಡಿಕೊಂಡವರು.

78ರ ಹರೆಯದ ಜಗನ್ನಾಥ್ ಭಂಡಾರಿ ಮತ್ತವರ ಪತ್ನಿ ಲತಾ ಭಂಡಾರಿ ಹಾಗೂ ಲತಾ ಭಂಡಾರಿಯ ಅಕ್ಕ ಸುಂದರಿ ಶೆಟ್ಟಿ ಎಂಬುವವರು ಈ ಮನೆಯಲ್ಲಿ ವಾಸಿಸುತ್ತಿದ್ದರು. ಎಂದಿನಂತೆ ಜಗನ್ನಾಥ್ ಭಂಡಾರಿ ಕೆಲಸಕ್ಕೆ ಹೋದವರು ಸಂಜೆ 4:30ರ ವೇಳೆಗೆ ಮನೆಗೆ ತೆರಳಿದಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಜಗನ್ನಾಥ ಭಂಡಾರಿ ಮನೆಗೆ ತೆರಳಿದಾಗ ಮನೆಯ ಬಾಗಿಲು ಮುಚ್ಚಲ್ಪಟ್ಟಿತ್ತು. ಕಿಟಕಿಯಿಂದ ನೋಡಿದಾಗ ಸಹೋದರಿಯರು ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ ಎನ್ನಲಾಗಿದೆ. ಕೌಟುಂಬಿಕ ವಿಚಾರದಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕಿಸಿದ್ದು, ತನಿಖೆ ನಡೆಯುತ್ತಿದೆ.

ಇತ್ತೀಚಿನ ಸುದ್ದಿ