ಉಡುಪಿಯಲ್ಲಿ ಮಹಿಷಾ ದಸರಕ್ಕೆ ನಿರ್ಬಂಧ: ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ: ಜಯನ್ ಮಲ್ಪೆ ಹೇಳಿಕೆ - Mahanayaka

ಉಡುಪಿಯಲ್ಲಿ ಮಹಿಷಾ ದಸರಕ್ಕೆ ನಿರ್ಬಂಧ: ನಮ್ಮ ಧಾರ್ಮಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಿದೆ: ಜಯನ್ ಮಲ್ಪೆ ಹೇಳಿಕೆ

mahisha dasara
14/10/2023


Provided by

ಉಡುಪಿ: ಉಡುಪಿಯಲ್ಲಿ ಮಹಿಷ ದಸರಾಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಷ ದಸರಾ ಆಯೋಜಕ ಜಯನ್ ಮಲ್ಪೆ ಹೇಳಿಕೆ ನೀಡಿದ್ದಾರೆ.

ಕರಾವಳಿಯಲ್ಲಿ ಪ್ರಪ್ರಥಮ ಬಾರಿಗೆ ಮಹಿಷಾ ದಸರಾ ಆಯೋಜಿಸಲು ಮುಂದಾಗಿದ್ದೆವು. ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಉದ್ದೇಶ ಇತ್ತು. ಜಿಲ್ಲಾಡಳಿತ ಮೆರವಣಿಗೆ ಮತ್ತು ಬ್ಯಾನರ್ ಅಳವಡಿಕೆಗೆ ನಿರ್ಬಂಧ ಮಾಡಿದೆ

ನಿಷೇದಾಜ್ಞೆ ಮಾಡಿರುವುದರಿಂದ ಧಾರ್ಮಿಕ ಸ್ವಾತಂತ್ರ್ಯ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಡ್ಡಿಯಾಗಿದೆ. ಮಹಿಷಾಸುರ ಯಾರು ಎಂಬ ವಿಚಾರ ಸಂಕಿರಣ ಆಯೋಜಿಸಿದ್ದೇವೆ. ನಾವು ಕಾನೂನು ನನ್ನ ಕೈಗೆ ಎತ್ತಿಕೊಳ್ಳುವುದಿಲ್ಲ. ಮಹಿಷಾ ದಸರಾ ಬದಲಿಗೆ ಮಹಿಶೋತ್ಸವ ನಡೆಸುತ್ತೇವೆ.  ರಾಜ್ಯಮಟ್ಟದ ನಾಯಕರ ಸಲಹೆ ಮೇರೆಗೆ ಬದಲಾವಣೆ ಮಾಡಿದ್ದೇವೆ. ದಲಿತ ಸಮುದಾಯದ ಬಂಧುಗಳು ಭಾಗವಹಿಸುತ್ತಾರೆ ಎಂದು ಅವರು ತಿಳಿಸಿದರು.

ಮಹಿಷ ರಾಕ್ಷಸ ಅಲ್ಲ ರಕ್ಷಕ ಎಂದು ಹೇಳುವುದು ನಮ್ಮ ಉದ್ದೇಶವಾಗಿದೆ. ಯಾವುದೇ ಧರ್ಮ ದೇವರ ನಿಂದನೆ ಮಾಡುವುದು ನಮ್ಮ ಉದ್ದೇಶವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮಹಿಷ ದಸರಾಕ್ಕೆ ನಿರ್ಬಂಧ:

ಉಡುಪಿಯಲ್ಲಿ ಮಹಿಷ ದಸರಾಕ್ಕೆ ನಿರ್ಬಂಧ ವಿಚಾರಕ್ಕೆ ಸಂಬಂಧಿಸಿದಂತೆ ಎಸ್ ಪಿ ಡಾ ‌.ಅರುಣ್ ಹೇಳಿಕೆ ನೀಡಿದ್ದಾರೆ.

ಮಹಿಷಾ ದಸರಾ ಪರ ವಿರುದ್ಧ ಮೆರವಣಿಗೆ, ಧರಣಿ, ಸತ್ಯಾಗ್ರಹ, ಪೋಸ್ಟರ್ ಹಾಕುವಂತಿಲ್ಲ. ಹೊರಾಂಗಣದಲ್ಲಿ ಯಾವುದೇ ಕಾರ್ಯಕ್ರಮ ಮಾಡುವಂತಿಲ್ಲ. ಜಿಲ್ಲಾಧಿಕಾರಿಗಳು 35 ಕೆ ಪಿ ಆಕ್ಟ್ ಪ್ರಕಾರ ಆದೇಶ ಮಾಡಿದ್ದಾರೆ. ಜಿಲ್ಲೆಯಲ್ಲಿ ಮಹಿಶಾಸುರ ದಸರಾ ಹೊರಾಂಗಣದಲ್ಲಿ ಆಚರಣೆ ನಿರ್ಬಂಧಿಸಲಾಗಿದೆ.

ಸೂಕ್ತ ಪೊಲೀಸ್ ಭದ್ರತೆ ಮಾಡಿದ್ದೇವೆ, ಅಗತ್ಯ ಬಿದ್ದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಒಳಾಂಗಣದಲ್ಲಿ ಕಾರ್ಯಕ್ರಮ ಮಾಡಲು ಅನುಮತಿ ಅಗತ್ಯವಿಲ್ಲ. ಒಳಾಂಗಣದಲ್ಲಿ ಕಾಯ್ದೆ ಉಲ್ಲಂಘನೆ ಆದರೆ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ