ಗ್ರಾಮೀಣ ಉತ್ಪನ್ನಗಳಿಗೆ ಬ್ರಾಂಡಿಂಗ್ ಅಗತ್ಯ | ಡಾ.ಡಿ.ವೀರೇಂದ್ರ ಹೆಗ್ಗಡೆ - Mahanayaka
12:49 PM Tuesday 21 - October 2025

ಗ್ರಾಮೀಣ ಉತ್ಪನ್ನಗಳಿಗೆ ಬ್ರಾಂಡಿಂಗ್ ಅಗತ್ಯ | ಡಾ.ಡಿ.ವೀರೇಂದ್ರ ಹೆಗ್ಗಡೆ

10/02/2021

ಬೆಂಗಳೂರು: ಗ್ರಾಮೀಣ ಪ್ರದೇಶಗಳಲ್ಲಿ ಉತ್ಪಾದಿಸುವ ಉತ್ಪನ್ನಗಳಿಗೆ ಸರಿಯಾದ ಬ್ರಾಂಡಿಂಗ್ ಅಗತ್ಯ. ಬ್ರಾಂಡಿಂಗ್ ಸಾಧ್ಯವಾದರೆ ತಾನಾಗಿಯೇ ಮಾರುಕಟ್ಟೆ ಲಭ್ಯವಾಗುತ್ತದೆ ಎಂದು ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಭಾರತೀಯ ವಿದ್ಯಾ ಭವನದಲ್ಲಿ ನಡೆದ ಧರ್ಮಸ್ಥಳದ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಹೊಸ ಉತ್ಪನ್ನಗಳ ಬಿಡುಗಡೆ ಸಮಾರಂಭದಲ್ಲಿದಲ್ಲಿ ಮಾತನಾಡಿದ ಅವರು,  ಗುಡಿ ಕೈಗಾರಿಕೆಗಳು ಮತ್ತು ಗೃಹೋಪಯೋಗಿ ವಸ್ತುಗಳ ಸ್ಥಳೀಯ ಉತ್ಪಾದನೆಯ ಮೂಲಕವೇ ದೇಶ ಸಶಕ್ತವಾಗಬೇಕು ಎಂದು ಮಹಾತ್ಮ ಗಾಂಧೀಜಿ ಬಯಸಿದ್ದರು. ಅವರ ಆಶಯಕ್ಕೆ ಪೂರಕವಾಗಿ ಸಿರಿ ಸಂಸ್ಥೆ ಕೆಲಸ‌ ಮಾಡುತ್ತಿದೆ ಎಂದರು.

ವಿದೇಶಿ ಕಂಪನಿಗಳು ಮತ್ತು ಕಾರ್ಪೋರೇಟ್ ಕಂಪನಿಗಳ ಉತ್ಪನ್ನಗಳ ಬಳಕೆಯು ಸ್ಥಳೀಯ ಉದ್ಯೋಗಗಳ ನಾಶಕ್ಕೆ ದಾರಿಯಾಗಲಿದೆ. ಈ ಬಗ್ಗೆ ಕೂಡ ಜಾಗೃತಿ ಅಗತ್ಯ ಎಂದು ಹೇಳಿದರು.

ಇತ್ತೀಚಿನ ಸುದ್ದಿ