ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ | ಪ್ರಧಾನಿ ಮೋದಿ - Mahanayaka
3:49 PM Wednesday 15 - October 2025

ಮೂರು ಕೃಷಿ ಕಾಯ್ದೆಗಳಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ | ಪ್ರಧಾನಿ ಮೋದಿ

10/02/2021

ನವದೆಹಲಿ: ರೈತರ ಅಭಿವೃದ್ಧಿಗಾಗಿ, ಅನ್ನದಾತ ಸ್ವಾಲಂಬಿಯಾಗಿ ತಮ್ಮ ಉತ್ಪನ್ನಗಳ ಮಾರಾಟ ಮಾಡಬೇಕು ಎಂಬ ಉದ್ದೇಶದಿಂದ ಮೂರು ಕೃಷಿ ಕಾಯ್ದೆಯನ್ನು ಜಾರಿಗೆ ತಂದಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಇದರಿಂದ ರೈತರಿಗೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ.


Provided by

ಲೋಕಸಭೆಯಲ್ಲಿ ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಕಾಯ್ದೆ ಜಾರಿ ಬಳಿಕ ದೇಶದಲ್ಲಿ ಯಾವುದೇ ಎಪಿಎಂಸಿ ಗಳನ್ನು ಮುಚ್ಚಲ್ಲ, ಬೆಳೆಗಳ ಬೆಂಬಲ ಬೆಲೆಯನ್ನೂ ರದ್ದು ಮಾಡಲ್ಲ, ಎಂ ಎಸ್ ಪಿ ಹೆಚ್ಚಳವಾಗಿದೆ. ಮಂಡಿಗಳ ಮೇಲೆ ಯಾವುದೇ ನಿರ್ಬಂಧವಿಲ್ಲ. ರೈತರಿಗೆ ಎಲ್ಲಿ ಲಾಭವಾಗುತ್ತದೆಯೋ ಅಲ್ಲಿಯೇ ಕೃಷಿ ಉತ್ಪನ್ನ ಮಾರಾಟ ಮಾಡಲು ಅವಕಾಶ ನೀಡಲಾಗಿದೆ ಎಂದರು.

ಹೋರಾಟ ನಡೆಸುತ್ತಿರುವ ರೈತರ ಭಾವನೆಗಳನ್ನು ಗೌರವಿಸುತ್ತೇನೆ. ಆದರೆ ವಿಪಕ್ಷಗಳು ಕೃಷಿ ಕಾಯ್ದೆಗೆ ರಾಜಕೀಯ ಬಣ್ಣ ಬಳಿದು ರೈತರ ದಿಕ್ಕುತಪ್ಪಿಸಬಾರದು. ಕಾರಣವಿಲ್ಲದೇ ವಿಪಕ್ಷಗಳು ಕೃಷಿ ಕಾಯ್ದೆ ವಿರೋಧಿಸುತ್ತಿವೆ ಎಂದು ಅವರು ಆರೋಪಿಸಿದರು.

ಇತ್ತೀಚಿನ ಸುದ್ದಿ