ನಾಯಿಯನ್ನು ಅಟ್ಟಾಡಿಸಿಕೊಂಡು ಬಂದು ಬಾವಿಗೆ ಬಿದ್ದ ಚಿರತೆ!: ಅರಣ್ಯಾಧಿಕಾರಿಗಳಿಂದ ರಕ್ಷಣೆ - Mahanayaka

ನಾಯಿಯನ್ನು ಅಟ್ಟಾಡಿಸಿಕೊಂಡು ಬಂದು ಬಾವಿಗೆ ಬಿದ್ದ ಚಿರತೆ!: ಅರಣ್ಯಾಧಿಕಾರಿಗಳಿಂದ ರಕ್ಷಣೆ

leopard
06/11/2023

ಮೂಡುಬಿದಿರೆ: ನಾಯಿಯನ್ನು ಅಟ್ಟಿಸಿಕೊಂಡು ಬಂದಿರುವ ಚಿರತೆ ಬಾವಿಯೊಳಗೆ ಬಿದ್ದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಮಾರೂರು ಸಮೀಪದ ಗುತ್ತು ಬಳಿಯಲ್ಲಿ ನಡೆದಿದೆ.

ಗೋಪಿ ಎಂಬವರ ಮನೆಯ ಬಾವಿಗೆ ಚಿರತೆ ಬಿದ್ದಿದ್ದು, ಬಾವಿಯೊಳಗೆ ಘರ್ಜಿಸುವ ಸದ್ದು ಕೇಳಿಸಿದ ಮನೆಯವರು ಬಂದು ನೋಡಿದಾಗ ಬಾವಿಯೊಳಗೆ ಚಿರತೆ ಇರುವುದು ಬೆಳಕಿಗೆ ಬಂದಿದೆ.

ಚಿರತೆಯನ್ನು ಕಂಡು ಭಯಭೀತರಾದ ಮನೆಯವರು ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.  ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಬಾವಿಗೆ ಬಿದ್ದಿದ್ದ  ಚಿರತೆಯನ್ನು ಬೋನಿನ ಮೂಲಕ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.

ವಿಡಿಯೋ ನೋಡಿ:

ಇತ್ತೀಚಿನ ಸುದ್ದಿ