ಭಗವದ್ಗೀತೆಗೆ ಅಪಮಾನ ಮಾಡಿದ ಸ್ಲೊವೇನಿಯನ್‌ ತತ್ವಜ್ಞಾನಿ: ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶ - Mahanayaka

ಭಗವದ್ಗೀತೆಗೆ ಅಪಮಾನ ಮಾಡಿದ ಸ್ಲೊವೇನಿಯನ್‌ ತತ್ವಜ್ಞಾನಿ: ವಿವಾದಾತ್ಮಕ ಹೇಳಿಕೆಗೆ ತೀವ್ರ ಆಕ್ರೋಶ

10/11/2023


Provided by

ಸ್ಲೊವೇನಿಯನ್‌ ತತ್ವಜ್ಞಾನಿ ಸ್ಲಾವೋಜ್‌ ಜಿಜೆಕ್‌ ಎಂಬುವವರು ಹಿಂದೂ ಧರ್ಮದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ಹರಿದು ಹಾಕಿ ಇದೊಂದು ಅಶ್ಲೀಲಕರ ಪವಿತ್ರ ಗಂಥಗಳಲ್ಲಿ ಒಂದಾಗಿದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಓಪನ್‌ ಹೈಮರ್‌ ಎಂಬ ಚಿತ್ರದಲ್ಲಿ ಭಗವದ್ಗೀತೆಯನ್ನು ಓದುವಾಗ ಪಾತ್ರಗಳಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳುವ ಒಂದು ದೃಶ್ಯ ಭಾರೀ ವಿವಾದಕ್ಕೆ ಕಾರಣವಾಗಿತ್ತು. ಈ ವಿವಾದವನ್ನು ಉಲ್ಲೇಖಿಸಿದ ಸ್ಲಾವೋಜ್‌ ಜಿಜೆಕ್, ನಾನು ಭಗವದ್ಗೀತೆಯ ಆಧ್ಯಾತ್ಮಿಕ ಭಾಗವನ್ನು ದ್ವೇಷಿಸುತ್ತೇನೆ. ಓಪನ್‌ ಹೈಮರ್‌ ಒಂದು ಸುಂದರ ಸಿನಿಮಾ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪಾಡ್‌ಕಾಸ್ಟ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಭಗವದ್ಗೀತೆ ಬಗ್ಗೆ ಮಾತನಾಡಿದ ಕಮ್ಯುನಿಸ್ಟ್‌ ತತ್ವಜ್ಞಾನಿ ಜಿಜೆಕ್‌, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಈ ಗ್ರಂಥ ಅಸಹ್ಯಕರವಾಗಿದೆ. ನಾಜಿ ಆಡಳಿತ ಹಿನ್ರಿಕ್‌ ಹಿಮ್ಲರ್‌ ಯಹೂದಿಗಳ ನರಮೇಧಕ್ಕೆ ನೈತಿಕ ಸಮರ್ಥನೆಯಾಗಿ ಭಗವದ್ಗೀತೆಯನ್ನು ಉಲ್ಲೇಖಿಸಿದ್ದ. ಯಹೂದಿಗಳನ್ನು ಯಾಕೆ ಕೊಲ್ಲಬೇಕು ಎಂಬ ಉತ್ತರಕ್ಕೆ ಭಗವದ್ಗೀತೆಯನ್ನು ಬಳಸುತ್ತಿದ್ದ. ನಾನು ಈ ಪುಸ್ತಕದ ಆಧ್ಯಾತ್ಮ ಭಾಗವನ್ನು ದ್ವೇಷಿಸುತ್ತೇನೆ. ಇದೊಂದು ಅಶ್ಲೀಲಕರ ಎಂದು ಜಿಜೆಕ್‌ ಹೇಳಿದ್ದಾರೆ.

ಓಪನ್‌ ಹೈಮರ್ ಚಿತ್ರದಲ್ಲಿ ಲೈಂಗಿಕ ಕ್ರಿಯೆ ವೇಳೆ ಭಗವದ್ಗೀತೆ ಓದಲು ಹೇಳಿದ್ದು ತಪ್ಪು.ಯಾಕೆಂದರೆ ಲೈಂಗಿಕತೆ ಒಂದು ಸುಂದರ ಕ್ರಿಯೆ. ಅದನ್ನು ಈ ಪುಸ್ತಕದ ಜೊತೆ ಸೇರಿಸಿ ಹಾಳು ಮಾಡಿದ್ದಾರೆ ಎಂದು ಜಿಜೆಕ್‌ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ