ಅರುಣ್‌ ಪುತ್ತಿಲ ಕಚೇರಿ ಮುಂದೆ ತಲವಾರು ಝಳಪಿಸಿದ ತಂಡ: ಇಬ್ಬರು ಬಾಲಕರ ಸಹಿತ 9 ಮಂದಿ ವಶಕ್ಕೆ - Mahanayaka

ಅರುಣ್‌ ಪುತ್ತಿಲ ಕಚೇರಿ ಮುಂದೆ ತಲವಾರು ಝಳಪಿಸಿದ ತಂಡ: ಇಬ್ಬರು ಬಾಲಕರ ಸಹಿತ 9 ಮಂದಿ ವಶಕ್ಕೆ

arun puttila
10/11/2023


Provided by

ಹಿಂದುತ್ವ ಸಂಘಟನೆಯ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮುಕ್ರಂಪಾಡಿಯಲ್ಲಿರುವ ಕಚೇರಿಯ ಮುಂಭಾಗದಲ್ಲಿ ಯುವಕನೋರ್ವ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿ ಬೊಬ್ಬೆ ಹೊಡೆದ ಘಟನೆ ಇಂದು ನಡೆದಿದೆ.

ಈ ಘಟನೆಗೆ ಸಂಬಂಧಿಸಿ ದಿನೇಶ ಪಂಜಿಗ (38), ಭವಿತ್ (19), ಮನ್ವಿತ್ (19), ಜಯಪ್ರಕಾಶ (18), ಚರಣ್ (23), ಮನೀಶ (23), ವಿನೀತ್ (19) ಹಾಗೂ ಇಬ್ಬರು ಅಪ್ರಾಪ್ತ ಬಾಲಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವ್ರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

ದಿನೇಶ್ ಪಂಜಿಗ ಎಂಬಾತ ತಂಡದೊಂದಿಗೆ ತಲವಾರು ಹಿಡಿದುಕೊಂಡು ಆಗಮಿಸಿದ್ದು, ಅರುಣ್ ಕುಮಾರ್ ಪುತ್ತಿಲ ಅವರ ಬೆಂಬಲಿಗ ಮನೀಶ್ ಕುಲಾಲ್ ಬನ್ನೂರು ಎಂಬವರನ್ನು ಗುರಿಯಾಗಿಟ್ಟುಗೊಂಡು ಬಂದಿದ್ದರು ಎಂದು ಆರೋಪಿಸಲಾಗಿದೆ.

ಇದೇ ವೇಳೆ ಪುತ್ತಿಲ ಕಚೇರಿಯಲ್ಲಿ ಕೃಷ್ಣಪ್ರಸಾದ್ ಶೆಟ್ಟಿ ಮತ್ತಿತರರು ಇದ್ದರು. ಮನೀಶ್ ಕುಲಾಲ್ ಕಚೇರಿಯಲ್ಲಿ ಇರಲಿಲ್ಲ. ಮಾಹಿತಿ ತಿಳಿದ ಮನೀಶ್ ಕುಲಾಲ್ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ಇಬ್ಬರು ಬಾಲಕರ ಸಹಿತ 9 ಮಂದಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಇತ್ತೀಚಿನ ಸುದ್ದಿ