ತಾಯಿ ಮತ್ತು ಮೂರು ಮಕ್ಕಳ ಹತ್ಯೆ ಪ್ರಕರಣ: ಆರೋಪಿ ಅರೆಸ್ಟ್ | ಕೊಲೆಗೆ ಕಾರಣವೇನು? - Mahanayaka

ತಾಯಿ ಮತ್ತು ಮೂರು ಮಕ್ಕಳ ಹತ್ಯೆ ಪ್ರಕರಣ: ಆರೋಪಿ ಅರೆಸ್ಟ್ | ಕೊಲೆಗೆ ಕಾರಣವೇನು?

nejaru case
14/11/2023


Provided by

ಉಡುಪಿ : ನೇಜಾರು ನಾಲ್ವರ ಕೊಲೆ ಪ್ರಕರಣದ ಆರೋಪಿಯನ್ನು ಬೆಳಗಾವಿಯಲ್ಲಿ ಪೊಲೀಸರು ಬಂಧಿಸಿ ಕರೆತರುತ್ತಿರುವ ಕುರಿತು ಮಾಹಿತಿ ಲಭ್ಯವಾಗಿದೆ.‌

ಬೆಳಗಾವಿಯ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿಯಲ್ಲಿ ಪ್ರವೀಣ್ ಅರುಣ್ ಚೌಗಲೆ(35) ಎಂಬಾತನನ್ನು ಬಂಧಿಸಿರುವುದಾಗಿ ವರದಿಯಾಗಿದೆ. ಈತ ಮಹಾರಾಷ್ಟ್ರದ ಸಾಂಗ್ಲಿ ಮೂಲದವ ಎಂದು ತಿಳಿದುಬಂದಿದೆ

ವಾರದ ಹಿಂದೆ ಈ ಕೊಲೆಯಾದ ಯುವತಿಯ ಹುಟ್ಟುಹಬ್ಬ ಆಚರಣೆ ನಡೆದಿತ್ತು, ಆ ಕಾರ್ಯಕ್ರಮಕ್ಕೆ ಆರೋಪಿ ಬಂದಿದ್ದ. ಅಲ್ಲಿ ಆಕೆಗೆ ಉಡುಗೊರೆಯಾಗಿ ಉಂಗುರ ತೊಡಿಸುವ ವಿಚಾರದಲ್ಲಿ ವಿವಾದ ಉಂಟಾಗಿತ್ತು ಎನ್ನಲಾಗಿದೆ. ಇದೇ ದ್ವೇಷದಲ್ಲಿ ಇಡೀ ಕುಟುಂಬವನ್ನೇ ಕೊಲೆ ಮಾಡಿರುವ ಸಾಧ್ಯತೆಯಿದೆ ಎಂಬ ಶಂಕೆಯಿದೆ.

ಇತ್ತೀಚಿನ ಸುದ್ದಿ