ಕ್ರಿಕೆಟ್ ಬೆಟ್ಟಿಂಗ್ ಮಾಸ್ಟರ್ ಬುಕ್ಕಿ ಅರೆಸ್ಟ್:‌  ಲಕ್ಷಾಂತರ ಹಣ ಪೊಲೀಸ್‌ ವಶಕ್ಕೆ - Mahanayaka

ಕ್ರಿಕೆಟ್ ಬೆಟ್ಟಿಂಗ್ ಮಾಸ್ಟರ್ ಬುಕ್ಕಿ ಅರೆಸ್ಟ್:‌  ಲಕ್ಷಾಂತರ ಹಣ ಪೊಲೀಸ್‌ ವಶಕ್ಕೆ

cricket betting
17/11/2023


Provided by

ಬೆಂಗಳೂರು:ಸಿ.ಸಿ.ಬಿ. ಪೊಲೀಸರಿಂದ ಕ್ರಿಕೆಟ್ ಬೆಟ್ಟಿಂಗ್ ಮಾಸ್ಟರ್ ಬುಕ್ಕಿಯ  ಬಂಧನವಾಗಿದ್ದು,ಬಂಧಿತ ಆರೋಪಿಯಿಂದ ಒಟ್ಟು 11,50,500/- ರೂ.ಗಳ ನಗದು ಹಣ ವಶಪಡಿಸಿಕೊಳ್ಳಲಾಗಿದೆ.ಅಲ್ಲದೇ ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಬಳಸುತ್ತಿದ್ದ 3 ಬ್ಯಾಂಕ್ ಖಾತೆ ವಹಿವಾಟನ್ನು  ಸ್ಥಗಿತಗೊಳಿಸಿ, ಒಟ್ಟು  41,71,000/- ಫ್ರೀಜ್ ಹಾಗೂ 6 ಮೊಬೈಲ್ ಫೋನ್‌ಗಳು ಮತ್ತು 1 ಲ್ಯಾಪ್ಟಾಪ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಕಳೆದ ಅಕ್ಟೋಬರ್‌19 ರಂದು ಮಂಗಳೂರು ನಗರ ಶಂಕರಪುರ ಪೊಲೀಸ್ , ಸರಹದಿನ ನ್ಯಾಷನಲ್ ಕಾಲೇಜ್ ಮುಂಭಾಗ, ಪಂಪ ಮಹಾಕವಿ ರಸ್ತೆಯಲ್ಲಿರುವ ಚಂದ್ರಶೇಖರ್ ನಿಲಯದ ಮನೆಯ ಮುಂಭಾಗದ ಫುಟ್‌ ಪಾತ್‌ ನಲ್ಲಿ ಒಬ್ಬ ಆಸಾಮಿಯು ಸೂಪರ್ ಮಾಸ‌ ಬುಕಿಯ ಕಡೆಯಿಂದ ಕ್ರಿಕೆಟ್ ಬೆಟ್ಟಿಂಗ್ allench.bet ಎಂಬ ಆಪ್‌/ವೆಬ್‌ ಸೈಟ್‌ ನ ಯೂಸ‌ಐಡಿ ಮತ್ತು ಪಾಸ್‌ ವರ್ಡ್‌ಗಳನ್ನು ಪಂಟರುಗಳಿಗೆ ಕೊಟ್ಟು, ಅವರಿಂದ ಕ್ರಿಕೆಟ್ ಬೆಟ್ಟಿಂಗ್ ಜೂಜಾಟವನ್ನು ಆಡಿಸಲು ಹಣ ಸಂಗ್ರಹಿಸಿ ರಿಚಾರ್ಜ್ ಮಾಡಲು ನಾಟಿಪ್ ಮುಖನ ಸೂಪರ್ ಮಾಸ‌ ಬುಕ್ಕಿಯೊಂದಿಗೆ ವ್ಯವಹರಿಸುತ್ತಿರುವ ಬಗ್ಗೆ ಸಿ.ಸಿ.ಬಿ. ಘಟಕದ ವಿಶೇಷ ವಿಚಾರಣ ದಳದ ಅಧಿಕಾರಿಗಳಿಗೆ ಖಚಿತ ಮಾಹಿತಿಯು ಬಂದಿರುತ್ತದೆ. ಈ ಮಾಹಿತಿಯನ್ನಾಧರಿಸಿ ಕಾರ್ಯಾಚರಣೆ ನಡೆಸಿದ್ದು, ಕ್ರಿಕೆಟ್‌ ಬೆಟ್ಟಿಂಗ್ ನಲ್ಲಿ ತೊಡಗಿದ್ದ ಒಬ್ಬ ಮಾಸ್ತರ್ ಬುಕ್ಕಿಯನ್ನು ವಶಕ್ಕೆ ಪಡೆದು, ಶಂಕರಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿರುತ್ತದೆ.

ಈ ಪಕರಣವನ್ನು ಸಿ.ಸಿ.ಬಿ ಘಟಕಕ್ಕೆ ವರ್ಗಾವಣೆ ಪಡೆದುಕೊಂಡು ತನಿಖೆಯನ್ನು ಮುಂದುವರೆಸಿದ್ದು, ಸದರಿ ಪ್ರಕರಣದ ಪ್ರಮುಖ ಆರೋಪಿತನು ಉಡುಪಿ ಜಿಲ್ಲೆಯ ಕಾರ್ಕಳ ತಾಲ್ಲೂಕು, ಆಧಿಕಾರ ಪೊಲೀಸ್ ಠಾಣೆ ಸರಹದ್ದಿನ ಒಂದು ಮನೆಯಲ್ಲಿ ವ್ಯವಸ್ಥಿತವಾಗಿ alexch be ಹಾಗೂ ಇತರೆ ಆನ್‌ ಲೈನ್ ಕ್ರಿಕೆಟ್ ಬೆಟ್ಟಿಂಗ್ ಆಪ್‌ ಗಳ ನಿರ್ವಹಣೆಯ ಸಂಬಂಧ ಹೊರರಾಜ್ಯದಿಂದ 4 ಜನ ಆಸಾಮಿಗಳನ್ನು ಕರೆತಂದು ಟೀಂ ಡೆವಲ್ಲಪ‌ ಎಂಬ ವಾಟಿಪ್‌ಸ್‌ ರಚಿಸಿಕೊಂಡು, ಅವುಗಳಿಗೆ ತರಬೇತಿ ನೀಡಿರುತ್ತಾರೆ, ದಿನಾಂಕ: 16,11,2023 ರಂದು ಸಿ.ಸಿ.ಬಿ. ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸದರಿ ಸ್ಥಳದ ಮೇಲೆ ದಾಳಿ ಮಾಡಿ, ಒಟ್ಟು ೯ 150,500/- ರವಾ ಹಣ ವಾಕ್ಯ ಬಡವಾ, ಕ್ರಿಕೆಟ್ ಬೆಟ್ಟಿಂಗ್ ಜೂಜಾಟಕ್ಕೆ ಬಳಸುತ್ತಿದ್ದ 3 ಬ್ಯಾಂಕ್‌ ಖಾತೆಗಳಿಂದ ಮಹಿವಾಟನ್ನು ಸ್ಥಗಿತಗೊಳಿಸಿ ಒಟ್ಟು 7 4171,000/- ಹಣ ಫೀಜ್ ಮಾಡಲಾಗಿದೆ. ಸದರಿ ಆಸಾಮಿಗಳಿಂದ ಕೃತ್ಯಕ್ಕೆ ಬಳಸುತ್ತಿದ್ದ 6 ಮೊಬೈಲ್‌ ಫೋನ್‌ಗಳು ಮತ್ತು 1 ಟ್ಯಾಪ್ ವರಕ್ಕೆ ಪಡೆದು ತನಿಖೆಯನ್ನು ಮುಂದುವರೆಸಿರುತ್ತದೆ.

ಕಾರ್ಯಾಚರಣೆಯನ್ನು ಉಪ ಪೊಲೀಸ್ ಆಯುಕ್ತರು, ಅಪರಾಧ-I ಮತ್ತು ಸಹಾಯಕ ಪೊಲೀಸ್ ಆಯುಕ್ತರು, ವಿಶೇಷ ವಿಚಾರಣಾ ದಳ ರವರ ಮಾರ್ಗದರ್ಶನದಲ್ಲಿ, ಸಿ.ಸಿ.ಬಿ. ವಿಶೇಷ ವಿಚಾರಣಾ ದಳದ ಪೊಲೀಸ್ ಇನ್‌ಪಿ‌ ಜಿ.ಟಿ.ಶ್ರೀನಿವಾಸ್ ಮತ್ತು ಪೊಲೀಸ್ ಸಬ್‌ ಇನ್ಸಪೆಕ್ಟರ್ ಪದ್ಮನಾಭ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿರುತ್ತಾರೆ.

ಇತ್ತೀಚಿನ ಸುದ್ದಿ