ರಾತ್ರಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ರು ಗ್ರಾಮಸ್ಥರು: ದಂಪತಿಯನ್ನು ಕೊಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ - Mahanayaka

ರಾತ್ರಿ ಮನೆಗೆ ನುಗ್ಗಿ ಬೆಂಕಿ ಹಚ್ಚಿದ್ರು ಗ್ರಾಮಸ್ಥರು: ದಂಪತಿಯನ್ನು ಕೊಂದ ಆರೋಪಿಗಳಿಗೆ ಜೀವಾವಧಿ ಶಿಕ್ಷೆ

18/11/2023


Provided by

ವಾಮಾಚಾರದ ಶಂಕೆಯಲ್ಲಿ ಮನೆಗೆ ನುಗ್ಗಿ ದಂಪತಿಯನ್ನ ಸಜೀವವಾಗಿ ದಹನ ಮಾಡಿದ್ದ 17 ಮಂದಿಗೆ ಒಡಿಶಾದ ಜಾಜ್​ಪುರ್​ ಜಿಲ್ಲೆಯ ನ್ಯಾಯಾಲಯವು ಜೀವಾವಧಿ ಶಿಕ್ಷೆ ನೀಡಿದೆ.

ಸಜೀವ ದಹನವಾಗಿದ್ದ ಮೃತ ದುರ್ಧೈವಿಗಳನ್ನು ಶೈಲಾ ಬಲ್ಮುಜ್ ಮತ್ತು ಸಾಂಬಾರಿ ಬಲ್ಮುಜ್ ಎಂದು ಗುರುತಿಸಲಾಗಿದೆ. ಜುಲೈ 7, 2020 ರ ತಡರಾತ್ರಿಯಲ್ಲಿ ಕಳಿಂಗ ನಗರ ಪ್ರದೇಶದ ನಿಮಾಪಾಲಿ ಗ್ರಾಮದಲ್ಲಿ ಶೈಲಾ ಬಲ್ಮುಜ್ ಮತ್ತು ಸಾಂಬಾರಿ ಬಲ್ಮುಜ್ ವಾಮಾಚಾರದ ನಡೆಸುತ್ತಿದ್ದಾರೆ ಎಂದು ಗ್ರಾಮಸ್ಥರು ಅನುಮಾನ ವ್ಯಕ್ತಪಡಿಸಿದ್ದರು.

ವಾಮಾಚಾರದ ಗುಮಾನಿಯಿಂದಲೇ ತಡರಾತ್ರಿ ಏಕಾಏಕಿ ಸಾಂಬಾರಿ ಬಲ್ಮುಜ್ ದಂಪತಿ ಇದ್ದ ಮನೆಗೆ ನುಗಿದ್ದ ಗ್ರಾಮಸ್ಥರು ದಂಪತಿ ಮೇಲೆ ಹಲ್ಲೆ ನಡೆಸಿ ನಂತರ ಅವರ ಮನೆಗೆ ಬೆಂಕಿ ಹಚ್ಚಿದ್ದರು. ಪರಿಣಾಮ ಶೈಲಾ ಮತ್ತು ಸಾಂಬಾರಿ ಬಲ್ಮುಜ್ ಬೆಂಕಿಗಾಹುತಿಯಾಗಿದ್ದರು. ಇದೀಗ ಮೂರು ವರ್ಷದ ಬಳಿಕ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

ಇತ್ತೀಚಿನ ಸುದ್ದಿ