ಅರ್ಧ ಶತಕ ಪೂರೈಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದ ವಿರಾಟ್ ಕೊಹ್ಲಿ

ಭಾರತ ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಪಂದ್ಯ ತೀವ್ರ ಕುತೂಹಲ ಸೃಷ್ಟಿಸಿದೆ. ಎರಡು ಬಲಿಷ್ಠ ತಂಡಗಳ ಅಸಲಿ ಹೋರಾಟ ಇದೀಗ ಆರಂಭವಾಗಿದೆ.
ಒಂದೆಡೆ ಆಸ್ಟ್ರೇಲಿಯಾ ತಂಡದ ಬಿಗಿ ಕ್ಷೇತ್ರ ರಕ್ಷಣೆಯ ನಡುವೆಯೂ ವಿರಾಟ್ ಕೊಹ್ಲಿ ಅರ್ಧ ಶತಕ ದಾಖಲಿಸಿದ್ದಾರೆ. ಏಕದಿನ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಅವರ 72ನೇ ಹಾಫ್ ಸೆಂಚುರಿ ಇದಾಗಿದೆ.
ಹಾಫ್ ಸೆಂಚುರಿ ದಾಖಲಿಸುತ್ತಿದ್ದಂತೆಯೇ ಕ್ರೀಡಾಂಗಣದಲ್ಲಿ ವಿರಾಟ್ ಅಭಿಮಾನಿಗಳ ಸಂಭ್ರಮ ವ್ಯಕ್ತಪಡಿಸಿದರು. ವಿರಾಟ್ ಕೊಹ್ಲಿ ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ, ಎದ್ದು ನಿಂತು ಚಪ್ಪಾಳೆ ತಟ್ಟಿ ಅಭಿನಂದಿಸಿದರು.
61 ಬಾಲ್ ನಲ್ಲಿ ವಿರಾಟ್ ಕೊಹ್ಲಿ 53 ರನ್ ಗಳಿಸಿದ್ದಾರೆ. ಕೆ.ಎಲ್.ರಾಹುಲ್ 66 ಬಾಲ್ ಗಳಲ್ಲಿ 36 ರನ್ ಗಳಿಸಿದ್ದಾರೆ. 3 ವಿಕೆಟ್ ಗಳ ನಷ್ಟಕ್ಕೆ ಭಾರತ 147 ರನ್ ಗಳನ್ನು ಗಳಿಸಿದೆ.
ವಿರಾಟ್ ಕೊಹ್ಲಿ ಅರ್ಧ ಶತಕ ಪೂರೈಸಿದ ಸಂಭ್ರಮದಲ್ಲಿದ್ದಾಗಲೇ ಪ್ಯಾಟ್ ಕಮಿನ್ಸ್ ಎಸೆದ 29ನೇ ಓವರ್ ನ 3ನೇ ಎಸೆತದಲ್ಲಿ ಬ್ಯಾಟ್ ಇನ್ ಸೈಡ್ ಎಡ್ಜ್ ಆಗಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸಿದರು. 63 ಎಸೆತೆಗಳಲ್ಲಿ 54 ರನ್ ಗಳಿಸಿ ವಿರಾಟ್ ಕೊಹ್ಲಿ ಮೈದಾನದಿಂದ ಹೊರ ನಡೆದರು.