ಬಟ್ಟೆಯ ಮೇಲಿಂದ ಅಪ್ರಾಪ್ತೆಯ ಎದೆ ಸವರುವುದು ಕಿರುಕುಳ ಅಲ್ಲ ಎಂದು ತೀರ್ಪು ನೀಡಿದ್ದ ನ್ಯಾಯಾಧೀಶೆಯ ಸೇವಾ ಅವಧಿ ಒಂದು ವರ್ಷಕ್ಕೆ ಇಳಿಕೆ - Mahanayaka
4:43 PM Wednesday 20 - August 2025

ಬಟ್ಟೆಯ ಮೇಲಿಂದ ಅಪ್ರಾಪ್ತೆಯ ಎದೆ ಸವರುವುದು ಕಿರುಕುಳ ಅಲ್ಲ ಎಂದು ತೀರ್ಪು ನೀಡಿದ್ದ ನ್ಯಾಯಾಧೀಶೆಯ ಸೇವಾ ಅವಧಿ ಒಂದು ವರ್ಷಕ್ಕೆ ಇಳಿಕೆ

13/02/2021


Provided by

ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ತೀರ್ಪುಗಳನ್ನು ನೀಡಿದ್ದು ಬಾಂಬೆ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲ ಅವರ ಸೇವಾ ಅವಧಿಯನ್ನು 2 ವರ್ಷಗಳಿಂದ ಒಂದು ವರ್ಷಕ್ಕೆ ಇಳಿಸಲಾಗಿದೆ.

ಸುಪ್ರೀಂ ಕೋರ್ಟ್ ಕೊಲೀಜಿಯಂ ಈ ಹಿಂದೆ ಇವರನ್ನು ಖಾಯಂ ನ್ಯಾಯಾಧೀಶರಾಗಿ ನೇಮಕ ಮಾಡಲು ಚಿಂತಿಸಿತ್ತು. ಆ ಬಳಿಕ ಹೆಚ್ಚುವರಿ ನ್ಯಾಯಾಧೀಶೆಯಾಗಿ ಎರಡು ವರ್ಷ ಅವಧಿಗೆ ಶಿಫಾರಸು ಮಾಡಿತ್ತು. ಆದರೆ, ಇವರ ವಿವಾದಾತ್ಮಕ ತೀರ್ಪುಗಳನ್ನು ಕಂಡು ಕೊಲೀಜಿಯಂ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.

ಎರಡು ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಿತ್ರವಾದ ತೀರ್ಪನ್ನು ನೀಡಿದ್ದರು. ಅಪ್ರಾಪ್ತೆಯ ಬಟ್ಟೆಯ ಮೇಲಿನಿಂದ ಎದೆ ಸವರಿಸಿದರೆ, ಅದು ಫೋಕ್ಸೋ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲ. ಅಪ್ರಾಪ್ತೆಯ ಕೈ ಹಿಡಿಸು ಜಿಪ್ ತೆಗೆಯುವುದು ಕೂಡ ಪೋಕ್ಸೋ ಕಾಯ್ದೆಯಡಿಯಲ್ಲಿ ಬರುವುದಿಲ್ಲ ಎಂದು ತೀರ್ಪು ನೀಡಿದ್ದರು.

ಈ ತೀರ್ಪಿಗೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗಿದ್ದರೆ, ನ್ಯಾಯಾಧೀಶರ ನಡುವೆ ಇದು ಬಹಳ ಚರ್ಚೆಗೀಡಾಗಿದ್ದು, ಇದು ಯಾವ ರೀತಿಯ ತೀರ್ಪು ಎಂದು ಪ್ರಶ್ನೆಗಳು ಕೇಳಿ ಬಂದಿದ್ದವು. ಇಷ್ಟೊಂದು ನಿರ್ಲಕ್ಷ್ಯದ ತೀರ್ಪು ನೀಡಿರುವ ಇವರನ್ನು ತಮ್ಮ ಸೇವೆಯಲ್ಲಿ ಒಂದು ವರ್ಷ ಮುಂದುವರಿಸಿರುವುದು ಒಂದು ಪವಾಡ. ಉತ್ತಮ ನ್ಯಾಯಾಧೀಶರನ್ನು ಈ ಪವಿತ್ರ ಸ್ಥಾನದಲ್ಲಿ ಕೂರಿಸಬಹುದಲ್ಲವೇ? ಎನ್ನುವ ಪ್ರಶ್ನೆಗಳು ಕೇಳಿ ಬಂದಿತ್ತು.

ಇತ್ತೀಚಿನ ಸುದ್ದಿ