ಮದ್ಯಸೇವಿಸಿ ನಾಲ್ವರು ಸ್ಥಳದಲ್ಲಿಯೇ ಸಾವು | ಓರ್ವನ ಸ್ಥಿತಿ ಗಂಭೀರ - Mahanayaka

ಮದ್ಯಸೇವಿಸಿ ನಾಲ್ವರು ಸ್ಥಳದಲ್ಲಿಯೇ ಸಾವು | ಓರ್ವನ ಸ್ಥಿತಿ ಗಂಭೀರ

15/02/2021


Provided by

ಛತ್ತಾರ್‌ ಪುರ್: ಮದ್ಯಪಾನ ಮಾಡಿದ ನಾಲ್ವರು ಮೃತಪಟ್ಟು ಇನ್ನೋರ್ವರು ಗಂಭೀರವಾಗಿ ಅಸ್ವಸ್ಥರಾಗಿರುವ ಘಟನೆ ಮಧ್ಯಪ್ರದೇಶದ ಛತ್ತಾರ್ ಪುರ ಜಿಲ್ಲೆಯ ಸಮಾರಂಭವೊಂದರಲ್ಲಿ ನಡೆದಿದೆ.

ಈ ಬಗ್ಗೆ ಪ್ರಾಥಮಿಕ ತನಿಖೆ ನಡೆಸಿದಾಗ ಮದ್ಯವು ಕಲಬೆರಕೆಯೂ ಅಲ್ಲ, ಸ್ಥಳೀಯ ಮಧ್ಯವೂ ಅಲ್ಲ. ಇದನ್ನು ಉತ್ತರ ಪ್ರದೇಶದ ಮದ್ಯ ಗುತ್ತಿಗೆದಾರರ ಅಂಗಡಿಯಿಂದ ಖರೀದಿಸಿ ತರಲಾಗಿದೆ ಎನ್ನುವ ವಿಚಾರ ತಿಳಿದು ಬಂದಿದೆ.

ಸದ್ಯ ಮದ್ಯದ ಮಾದರಿಯನ್ನು ಸಂಗ್ರಹಿಸಿರುವ ಪೊಲೀಸರು ಪ್ರಯೋಗಾಲಯಕ್ಕೆ  ಕಳಹಿಸಿದ್ದು, ತನಿಖೆ ಮುಂದುವರಿದಿದೆ.

ಇತ್ತೀಚಿನ ಸುದ್ದಿ