ಹಣ ಕೊಡದಿದ್ದಕ್ಕೆ ತಾಯಿಯನ್ನೇ ಕೊಂದ: ಸೂಟ್ ಕೇಸ್ ನಲ್ಲಿ ಡೆಡ್ ಬಾಡಿ ಪೀಸ್ ಪೀಸ್ ಮಾಡಿ ನದಿಗೆ ಎಸೆಯಲು ಹೋದ ಕಿಲ್ಲರ್ ಪುತ್ರ..! - Mahanayaka

ಹಣ ಕೊಡದಿದ್ದಕ್ಕೆ ತಾಯಿಯನ್ನೇ ಕೊಂದ: ಸೂಟ್ ಕೇಸ್ ನಲ್ಲಿ ಡೆಡ್ ಬಾಡಿ ಪೀಸ್ ಪೀಸ್ ಮಾಡಿ ನದಿಗೆ ಎಸೆಯಲು ಹೋದ ಕಿಲ್ಲರ್ ಪುತ್ರ..!

16/12/2023

ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ತನ್ನ ಹೆತ್ತ ತಾಯಿಯನ್ನೇ ಕೊಲೆ‌ ಮಾಡಿ ಸೂಟ್‌ಕೇಸ್‌ನಲ್ಲಿ ತುಂಬಿದ ಅಮಾನವೀಯ ಘಟನೆ ಬಿಹಾರದಲ್ಲಿ ನಡೆದಿದೆ.
ಪ್ರತಿಮಾ ದೇವಿ ಮೃತ ದುರ್ದೈವಿ. ಹಿಮಾಂಶು, ಬಂಧಿತ ಆರೋಪಿಯಾಗಿದ್ದಾನೆ.

ಹಿಮಾಂಶು ಐಐಟಿ ಆಕಾಂಕ್ಷಿಯಾಗಿದ್ದು, ತನ್ನ ತಾಯಿಯೊಂದಿಗೆ ಬಿಹಾರದಲ್ಲಿ ನೆಲೆಸಿದ್ದ. ಹಿಮಾಂಶು ತನ್ನ ತಾಯಿಯ ಬಳಿ 5 ಸಾವಿರ ರೂಪಾಯಿ ಹಣ ಕೇಳಿದ್ದ. ಆದರೆ ತಾಯಿ ಪ್ರತಿಮಾ ಕೊಟ್ಟಿರಲಿಲ್ಲ. ಇದರಿಂದಾಗಿ ಇಬ್ಬರ ನಡುವೆ ಜಗಳ ಶುರುವಾಗಿತ್ತು. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಆತ ಕೋಪದಲ್ಲಿ ಪ್ರತಿಮಾಳನ್ನು ಹತ್ಯೆ ಮಾಡಿದ್ದಾನೆ.

ಹತ್ಯೆ ಮಾಡಿದ ಬಳಿಕ ಆತ ತನ್ನ ತಾಯಿಯ ಮೃತದೇಹವನ್ನು ಸೂಟ್​ಕೇಸ್​ ಒಂದರಲ್ಲಿ ಪ್ಯಾಕ್​ ಮಾಡಿ ಉತ್ತರಪ್ರದೇಶದ ಪ್ರಯಾಗ್​ರಾಜ್​ಗೆ ಪ್ರಯಾಣ ಬೆಳೆಸಿದ್ದಾನೆ. ಬಳಿಕ ತ್ರಿವೇಣಿ ಸಂಗಮದಲ್ಲಿ ಆರೋಪಿ ಶವವನ್ನು ಮುಳುಗಿಸಲು ಯತ್ನಿಸಿದ್ದಾನೆ. ಈ ವೇಳೆ ಇದನ್ನು ಗಮನಿಸಿದ ಸ್ಥಳೀಯರು ಶಂಕೆಯ ಮೇರೆಗೆ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಸೂಟ್​ಕೇಸ್​ನಲ್ಲಿ ಮೃತದೇಹ ಪತ್ತೆಯಾಗಿದೆ. ಕೂಡಲೇ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ.

ಇತ್ತೀಚಿನ ಸುದ್ದಿ