ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣ: ಸಹ ಸಂಚುಕೋರ ಮಹೇಶ್ ಕುಮಾವತ್ ಬಂಧನ

ಸಂಸತ್ ಭದ್ರತಾ ಉಲ್ಲಂಘನೆ ಪ್ರಕರಣದ ಆರನೇ ಆರೋಪಿ ಮಹೇಶ್ ಕುಮಾವತ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಸಂಸತ್ ದಾಳಿಯ ಮಾಸ್ಟರ್ ಮೈಂಡ್ ಲಲಿತ್ ಝಾ ಸಂಸತ್ತಿನ ಮೇಲಿನ ದಾಳಿಯ ನಂತರ ದೆಹಲಿಯಿಂದ ಪಲಾಯನ ಮಾಡಲು ಕುಮಾವತ್ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ದೆಹಲಿ ಪೊಲೀಸರ ಪ್ರಕಾರ, ಸಂಸತ್ತಿನ ಮೇಲೆ ದಾಳಿ ನಡೆಸುವ ಪಿತೂರಿಯಲ್ಲಿ ಮಹೇಶ್ ಭಾಗಿಯಾಗಿದ್ದಾನೆ.
ದೆಹಲಿ ಪೊಲೀಸರು ಮಹೇಶ್ ಕುಮಾವತ್ ನನ್ನು ಪತ್ತೆಹಚ್ಚಿ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದ ವಿಚಾರಣೆಗಾಗಿ ಕರೆದೊಯ್ದಿದ್ದಾರೆ.
ಸಂಸತ್ ದಾಳಿಯ ದಿನದಂದು ಮಹೇಶ್ ದೆಹಲಿಗೆ ಆಗಮಿಸಿದಾಗ ಇಬ್ಬರು ವ್ಯಕ್ತಿಗಳು ಲೋಕಸಭೆಯನ್ನು ಪ್ರವೇಶಿಸಿದರು. ಅಧಿವೇಶನದ ಸಮಯದಲ್ಲಿ ಹೊಗೆ ಬಾಂಬ್ ಗಳನ್ನು ಸಿಡಿಸಿದರು.
ನವದೆಹಲಿಯಲ್ಲಿ ನಡೆದ ಇಡೀ ದಾಳಿಯ ರೂವಾರಿ ಲಲಿತ್ ಝಾ, ಪೊಲೀಸರಿಂದ ತಪ್ಪಿಸಿಕೊಂಡು ರಾಜಸ್ಥಾನದಲ್ಲಿ ಮಹೇಶ್ ಅಡಗುತಾಣದಲ್ಲಿ ಆಶ್ರಯ ಪಡೆದಿದ್ದ. ವರದಿಗಳ ಪ್ರಕಾರ, ಸಂಸತ್ತಿನ ಭದ್ರತಾ ಉಲ್ಲಂಘನೆಗೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟ ನಾಲ್ವರು ವ್ಯಕ್ತಿಗಳ ಮೊಬೈಲ್ ಫೋನ್ ಗಳನ್ನು ಅಡಗಿಸಿಡಲು ಮಹೇಶ್ ಸಹಕರಿಸಿದ್ದ ಎಂದು ಆರೋಪಿಸಲಾಗಿದೆ.