ಏಕಾಏಕಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡು ಧಗಧಗನೆ ಉರಿದ  2 ಆಂಬುಲೆನ್ಸ್‌ ಗಳು! - Mahanayaka
10:56 PM Tuesday 4 - November 2025

ಏಕಾಏಕಿ ಬೆಂಕಿ ಹತ್ತಿಕೊಂಡು ಸ್ಫೋಟಗೊಂಡು ಧಗಧಗನೆ ಉರಿದ  2 ಆಂಬುಲೆನ್ಸ್‌ ಗಳು!

maharashtra ambulence
17/12/2023

ನಾಗ್ಪುರ:  ಏಕಾಏಕಿ ಎರಡು ಆಂಬುಲೆನ್ಸ್‌ ಗಳು ಸ್ಫೋಟಗೊಂಡು ಹೊತ್ತಿ ಉರಿದ ಘಟನೆ ಮಹಾರಾಷ್ಟ್ರದ ಬೆಸಾ ಎಂಬ ಪ್ರದೇಶದಲ್ಲಿ ನಡೆದಿದ್ದು, ಕೆಲವೇ ಕ್ಷಣಗಳಲ್ಲಿ ಎರಡು ಆಂಬುಲೆನ್ಸ್‌ ಗಳು ಧಗಧಗನೇ ಉರಿದಿವೆ.

ಸಣ್ಣ ಕಿಡಿಯೊಂದರಿಂದ ಆಂಬುಲೆನ್ಸ್‌ ಗೆ ಬೆಂಕಿ ಹತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ. ಆಂಬುಲೆನ್ಸ್‌ ಸ್ಫೋಟಿಸಿದ ದೃಶ್ಯ ನಾಗರಿಕರನ್ನು ಬೆಚ್ಚಿಬೀಳಿಸಿತ್ತು.

ಕ್ಷಣ ಕಾಲದಲ್ಲೇ ಎರಡು ಆಂಬುಲೆನ್ಸ್‌ ಗಳು ಬೆಂಕಿ ಹೊತ್ತಿಕೊಂಡು ಭಯಾನಕವಾಗಿ ಸುಟ್ಟು ಕರಕಲಾಗಿವೆ.  ಈ ಸ್ಥಳವಿಡೀ ದಟ್ಟ ಹೊಗೆಯಿಂದ ಆವರಿಸಿದ್ದು, ಸಾರ್ವಜನಿಕರು ಆತಂಕದಿಂದ ನೋಡುತ್ತಿರುವ ದೃಶ್ಯ ಕಂಡು ಬಂತು.

ಘಟನಾ ಸ್ಥಳಕ್ಕೆ ಮಹಾರಾಷ್ಟ್ರ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್‌  ಈ ಘಟನೆಯಿಂದ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.

ಇತ್ತೀಚಿನ ಸುದ್ದಿ