ಭೀಕರ: ಪ್ರೇಯಸಿಯನ್ನು ಕೊಲ್ಲಲು ಯತ್ನಿಸಿದ ಮಹಾರಾಷ್ಟ್ರ ಅಧಿಕಾರಿಯ ಮಗ ಅರೆಸ್ಟ್

ಮಹಾರಾಷ್ಟ್ರದ ಥಾಣೆಯಲ್ಲಿ 26 ವರ್ಷದ ಪ್ರಿಯಾ ಸಿಂಗ್ ಎಂಬ ಯುವತಿಯ ಮೇಲೆ ಹಲ್ಲೆ ಮಾಡಿ ಹತ್ಯೆಗೆ ಯತ್ನಿಸಿದ್ದ ಆರೋಪಿ ಅಶ್ವಜಿತ್ ಗಾಯಕ್ವಾಡ್ ನನ್ನು ಬಂಧಿಸಲಾಗಿದೆ. ಇವರು ಮಹಾರಾಷ್ಟ್ರದ ಹಿರಿಯ ಅಧಿಕಾರಿಯೊಬ್ಬರ ಪುತ್ರ. ಈ ಘಟನೆಯ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (ಎಸ್ಐಟಿ)ವು ಲ್ಯಾಂಡ್ ರೋವರ್ ಡಿಫೆಂಡರ್ ಕಾರನ್ನು ಸಹ ವಶಪಡಿಸಿಕೊಂಡಿದೆ. ಕಾರನ್ನು ಅಪರಾಧಕ್ಕೆ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.
ಮುಖ್ಯ ಆರೋಪಿ ಅಶ್ವಜಿತ್ ಗಾಯಕ್ವಾಡ್ ಮತ್ತು ಆತನ ಇಬ್ಬರು ಸಹಚರರಾದ ರೋಮಿಲ್ ಪಾಟೀಲ್ ಮತ್ತು ಸಾಗರ್ ಶೇಡ್ಗೆ ಎಂಬುವವರನ್ನು ಎಸ್ಐಟಿ ಬಂಧಿಸಿದೆ ಎಂದು ಥಾಣೆ ಪೊಲೀಸರು ತಿಳಿಸಿದ್ದಾರೆ.
26 ವರ್ಷದ ಮಹಿಳೆ ಡಿಸೆಂಬರ್ 11 ರಂದು ಗಾಯಕ್ವಾಡ್ ಅವರನ್ನು ಭೇಟಿಯಾಗಲು ಹೋಗಿದ್ದೆ ಎಂದು ಹೇಳಿಕೊಂಡಿದ್ದರು. ಅವನು ‘ವಿಚಿತ್ರವಾಗಿ ವರ್ತಿಸುತ್ತಿದ್ದಾನೆ’ ಎಂದು ಅವಳು ಆರೋಪಿಸಿದ್ದಳು.
“ನನ್ನ ಗೆಳೆಯ ನನ್ನ ಕೆನ್ನೆಗೆ ಹೊಡೆದಿದ್ದ. ನನ್ನ ಕುತ್ತಿಗೆಯನ್ನು ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ. ನಾನು ಅವನನ್ನು ದೂರ ತಳ್ಳಲು ಪ್ರಯತ್ನಿಸಿದೆ. ಅವನು ನನ್ನ ಕೈಯನ್ನು ಕಚ್ಚಿ ಹೊಡೆದಿದ್ದಾನೆ. ನನ್ನ ಕೂದಲನ್ನು ಎಳೆದನು ಮತ್ತು ಅವನ ಸ್ನೇಹಿತ ನನ್ನನ್ನು ಎಲ್ಲಿಂದಲೋ ನೆಲಕ್ಕೆ ತಳ್ಳಿದ್ದ” ಎಂದು ಪ್ರಿಯಾ ಸಿಂಗ್ ಇನ್ಸ್ಟಾಗ್ರಾಮ್ನಲ್ಲಿ ಘಟನೆಯನ್ನು ವಿವರಿಸಿದ್ದಾರೆ.
ತನ್ನ ಮೊಬೈಲ್ ಮತ್ತು ಚೀಲವನ್ನು ಪಡೆಯಲು ತಾನು ಅವನ ಕಾರಿನ ಬಳಿ ಓಡಿದೆ. ಆಗ ಅಶ್ವಜಿತ್ ತನ್ನ ಚಾಲಕನನ್ನು ತನ್ನತ್ರ ಚಲಾಯಿಸಲು ಹೇಳಿದ್ದ ಎಂದು ಅವಳು ಆರೋಪಿಸಿದ್ದಾಳೆ.
ಮಹಿಳೆ ನೀಡಿದ ದೂರಿನ ನಂತರ ಅಶ್ವಜೋತ್ ಗಾಯಕ್ವಾಡ್ ಮತ್ತು ಇತರ ಇಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಸ್ವಯಂಪ್ರೇರಿತವಾಗಿ ನೋವುಂಟು ಮಾಡುವುದು), 279 (ರಾಶ್ ಡ್ರೈವಿಂಗ್) ಮತ್ತು ಇತರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇನ್ನು ಅಶ್ವಜಿತ್ ಗಾಯಕ್ವಾಡ್ ಮತ್ತು ಅವರ ಕುಟುಂಬವು ಮಹಿಳೆ ಮಾಡಿದ ಎಲ್ಲಾ ಆರೋಪಗಳನ್ನು ನಿರಾಕರಿಸಿದೆ. ಗಾಯಕ್ವಾಡ್ ಇಡೀ ಘಟನೆಯನ್ನು “ಹಣವನ್ನು ಸುಲಿಗೆ ಮಾಡುವ ಪ್ರಯತ್ನ” ಎಂದು ಆರೋಪಿಸಿದ್ದಾರೆ.