ರೀಲ್ಸ್‌ ಮಾಡುತ್ತಿದ್ದ ಯುವಕರಿಗೆ ರೈಲು ಡಿಕ್ಕಿ: ಮೂವರು ಸಾವು - Mahanayaka

ರೀಲ್ಸ್‌ ಮಾಡುತ್ತಿದ್ದ ಯುವಕರಿಗೆ ರೈಲು ಡಿಕ್ಕಿ: ಮೂವರು ಸಾವು

train
21/12/2023

ಪಶ್ಚಿಮ ಬಂಗಾಳ: ರೀಲ್ಸ್‌ ಮಾಡುತ್ತಿದ್ದ ಮೂವರು ಯುವಕರಿಗೆ ರೈಲು ಡಿಕ್ಕಿ ಹೊಡೆದಿದ್ದು, ಪರಿಣಾಮವಾಗಿ ಮೂವರೂ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಪಶ್ಚಿಮ ಬಂಗಾಳದ ಮಾಲ್ಡಾದ ಸ್ಥಳೀಯ ರೈಲ್ವೇ ನಿಲ್ದಾಣಗಳ ನಡುವೆ ನಡೆದಿದೆ.

ಒಟ್ಟು ಐವರು ಯುವಕರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ರೈಲ್ವೆ ಸೇತುವೆಯ ಮೇಲೆ ರೀಲ್ಸ್ ಮಾಡುತ್ತಿದ್ದರು.  ರೈಲು ಮೂವರಿಗೆ ಡಿಕ್ಕಿ ಹೊಡೆದಿದ್ದರೆ, ಇಬ್ಬರು ನದಿಗೆ ಹಾರಿ ಜೀವ ಉಳಿಸಿಕೊಂಡಿದ್ದಾರೆ.

ಘಟನೆಯ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.  ಇನ್ನೂ  ಘಟನೆಯನ್ನು  ರೈಲ್ವೇ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಮಾಲ್ಡಾ ವಿಭಾಗದ ಅಜಿಮ್‌ಗಂಜ್-ನ್ಯೂ ಫರಕ್ಕಾ ವಿಭಾಗದ ಸುಜ್ನಿಪಾರಾ ಮತ್ತು ಅಹಿರೋನ್ ನಿಲ್ದಾಣಗಳ ನಡುವಿನ ರೈಲ್ವೆ ಸೇತುವೆಯ ಮೇಲೆ ಹಳಿಗಳ ಮೇಲೆ ನಿಂತು ರೀಲ್ಸ್ ಮಾಡುತ್ತಿದ್ದಾಗ 13053 ಹೌರಾ-ರಾಧಿಕಪೂರ್ ಕುಲಿಕ್ ಎಕ್ಸ್‌ಪ್ರೆಸ್‌ ರೈಲು ಯುವಕರಿಗೆ ಡಿಕ್ಕಿ ಹೊಡೆದಿದೆ.

ಇತ್ತೀಚಿನ ಸುದ್ದಿ